ಮರಗೋಡು: ಚಾಲಕನ ನಿಯಂತ್ರಣ ತಪ್ಪಿ ಗೊಬ್ಬರ ಸಾಗಿಸುತ್ತಿದ್ದ ಲಾರಿ ಪಲ್ಟಿ
ಮಡಿಕೇರಿ: ಮಂಗಳೂರಿನಿಂದ ನೆಲ್ಲಿಹುದಿಕೇರಿ ಕಡೆಗೆ ರಸಗೊಬ್ಬರ ಸಾಗಿಸುವ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಮರಗೋಡು ಸಮೀಪದ ಮುತ್ತಾರ್ಮುಡಿ ಪಕ್ಕದ ಸೇತುವೆ ಬಳಿಯ ರಸ್ತೆ ತಿರುವಿನಲ್ಲಿ ಪಲ್ಟಿಯಾಗಿದೆ.ಅಪಘಾತದಿಂದ ಚಾಲಕ ಹಾಗೂ ಕ್ಲೀನರ್ ಗೆ ಸಣ್ಣ ಪುಟ್ಟ ಗಾಯಗೊಂಡಿದ್ದು ಪ್ರಾಣಾಪಾಯ ದಿಂದ ಪಾರಾಗಿದ್ದಾರೆ.