ಮಾಸ್ಟರ್ಸ್ ಫುಟ್ಬಾಲ್ ಪಂದ್ಯಾವಳಿ: ಅಲ್ಫಾಲ್ ಎಫ್.ಸಿ ಚಾಂಪಿಯನ್, ಸ್ನೇಹಿತರ ಬಳಗ ರನ್ನರ್ಸ್
ವಿರಾಜಪೇಟೆ: ನಗರದ ತಾಲೂಕು ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದ ಹೊನಲು ಬೆಳಕಿನ 50 ವರ್ಷ ಮೇಲ್ಪಟ್ಟ ಪುರುಷರ ಕಾಲ್ಚೆಂಡು ಪಂದ್ಯಾಟ ನಡೆಯಿತು. ಪಂದ್ಯಾಟದಲ್ಲಿ ನಗರದ ಸ್ನೇಹಿತರ ಬಳಗ, ಬ್ಲೂ ಸ್ಟಾರ್ ಎಫ್.ಸಿ, ಆಲ್ಪಾಲ್ ಎಫ್.ಸಿ, ಬ್ಲಾಕ್ ಅಂಡ್ ವೈಟ್ ಎಫ್.ಸಿ. ಜಗ್ವಾರ್ ಎಫ್.ಸಿ. ಎಸ್.ಪಿ.ಟವರ್ ಎಫ್.ಸಿ, ಮತ್ತು ಸೌಪರ್ಣಿಕ ಎಫ್.ಸಿ. ಶಿವಾಜಿ ಎಫ್.ಸಿ, ಒಟ್ಟು ಎಂಟು ತಂಡಗಳು ಭಾಗವಹಿಸಿದ್ದವು.ಅಂತಿಮ ಸುತ್ತಿಗೆ ನಾಲ್ಕು ತಂಡಗಳು ಪ್ರವೇಶ ಪಡೆದವು.
ಮೊದಲ ಸೆಮಿಫೈನಲ್ ಪಂದ್ಯಾಟ ಸ್ನೇಹಿತ ಬಳಗ ಮತ್ತು ಬ್ಲಾಕ್ ಅಂಡ್ ವೈಟ್ ತಂಡಗಳ ಮಧ್ಯೆ ಪಂದ್ಯ ನಡೆದು 2-0 ಗೋಲುಗಳಿಂದ ಸ್ನೇಹಿತರ ಬಳಗ ತಂಡ ಫೈನಲ್ ಪ್ರವೇಶ ಮಾಡಿತು. ದ್ವಿತೀಯ ಸೆಮಿಫೈನಲ್ ಪಂದ್ಯ ಅಲ್ಫಾಲ್ ಎಫ್.ಸಿ. ಮತ್ತು ಶಿವಾಜಿ ತಂಡಗಳ ಮಧ್ಯೆ ತೀವ್ರ ರೀತಿಯಲ್ಲಿ ಪೈಪೋಟಿ ನಡೆಯಿತು. ಪಂದ್ಯ ಮುಕ್ತಾಯ ಕಂಡರು ಉಭಯ ತಂಡಗಳು ಗೋಲು ಗಳಿಕೆಯಲ್ಲಿ ವಿಫಲರಾಗಿದ್ದರು ನಂತರ ಪೆನಾಲ್ಟಿ ಶೂಟ್ ಜೌಟ್ ಮೊರೆಹೋದ ಆಟಗಾರರು ಉಭಯ ತಂಡಗಳು ಸಮಬಲ ಸಾಧಿಸಿದರು. ನಂತರದ ಹೆಚ್ಚುವರಿ ಪೆನಾಲ್ಟಿ ಶೂಟ್ ಜೌಟ್ ನಲ್ಲಿ 02-01 ಗೋಲುಗಳಿಂದ ಅಲ್ಪಾಲ್ ಎಫ್.ಸಿ ತಂಡ ವಿರೋಜಿತ ಗೆಲವು ಪಡೆದು ಫೈನಲ್‌ಗೆ ಲಗ್ಗೆಯಿಟ್ಟಿತು.
ಫೈನಲ್ ಪಂದ್ಯಾಟ ಸ್ನೇಹಿತರ ಬಳಗ ಮತ್ತು ಅಲ್ಪಾಲ್ ಎಫ್.ಸಿ ತಂಡಗಳ ಮಧ್ಯೆ ಪಂದ್ಯ ನಡೆದು ಪ್ರಥಮಾರ್ಧದಲ್ಲಿ ಉಭಯ ತಂಡಗಳು ಯಾವುದೇ ಗೋಲು ಸಾಧಿಸಲಿಲ್ಲ. ದ್ವಿತೀಯಾರ್ದದಲ್ಲಿ ಅಲ್ಪಾಲ್ ಎಫ್.ಸಿ ತಂಡದ ಮುನ್ನಡೆ ಆಟಗಾರ ಅಲ್ತಾಫ್ ಅವರು ವಿರುದ್ದ ತಂಡಕ್ಕೆ ಒಂದು ಗೋಲು ಗಳಿಸುವ ಮೂಲಕ ಅಘಾತ ತಂದಿಟ್ಟರು. ಇದು ವಿಜಯಕ್ಕೆ ನಾಂದಿಯಾಯಿತು.ಅಲ್ಫಾಲ್ ಎಫ್.ಸಿ ತಂಡ ಚಾಂಪಿಯನ್ ಆಗಿ ಹೊರಮೊಮ್ಮಿತು. ಸ್ನೇಹಿತರ ಬಳಗ ತಂಡ ದ್ವೀತಿಯ ಸ್ಥಾನ ಪಡೆದುಕೊಂಡಿತು.
ವಿಜೇತ ತಂಡಗಳಿಗೆ ಟ್ರೋಫಿ ಮತ್ತು ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಹಾಗೂ ಪಂದ್ಯಾಟದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಆಟಗಾರರಿಗೆ ವೈಯುಕ್ತಿ ಪಾರಿತೋಷಕ ನೀಡಿ ಗೌರವಿಸಲಾಯಿತು. ಕೂರ್ಗ್ ಪುಟ್ಬಾಲ್ ಮಾಸ್ಟರ್ ಕಪ್ ಆಯೋಜಕ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು, ವಿವಿಧ ತಂಡಗಳ ಮಾಲೀಕರು, ಅಟಗಾರರು, ತೀರ್ಪುಗಾರರು, ಕ್ರೀಡಾಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
ವರದಿ:ಕಿಶೋರ್ ಕುಮಾರ್ ಶೆಟ್ಟಿ