ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸೋಮವಾರಪೇಟೆ ತಾಲ್ಲೂಕು ಘಟಕದ ಪದಾಧಿಕಾರಿಗಳ ಸಭೆ
ಕುಶಾಲನಗರ:ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಸೋಮವಾರಪೇಟೆ ತಾಲ್ಲೂಕು ಘಟಕದ ಪದಾಧಿಕಾರಿಗಳ ತಾಲ್ಲೂಕು ಕಾರ್ಯಕಾರಿಣಿ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಶನಿವಾರ ಕುಶಾಲನಗರ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆಯಿತು. ನೂತನವಾಗಿ ಆಯ್ಕೆಯಾದ ಜಿಲ್ಲಾಧ್ಯಕ್ಷರಾದ ಹೆಚ್.ಜಿ ಕುಮಾರ್,ಕಾರ್ಯದರ್ಶಿಯಾದ ಮಹೇಂದ್ರ ಎಸ್ಎಮ್ ಅವರನ್ನು ತಾಲ್ಲೂಕು ಸಂಘದಿಂದ ಸನ್ಮಾನಿಸಲಾಯಿತು.
ನೂತನವಾಗಿ ಪದಾಧಿಕಾರಿಗಳಾಗಿ ದಿನೇಶ್ ಗೌಡಳ್ಳಿ,ಹೂಬಟ್೯ ಡಯಾಸ್,ಲೋಕೇಶ್ ಸಿ ಡಿ,ವಿಕ್ರಾಂತ್ ಕೇಳ್ಕರ್,ವಿಜಯ್ ಕುಮಾರ್,ಅರುಣ್ ಕುಮಾರ್ ಆಯ್ಕೆಯಾದರು. ಅನುದಾನಿತ ಶಾಲಾ ಶಿಕ್ಷಕರು ಅನುಭವಿಸುತ್ತಿರುವ ವೇತನದ ಸಮಸ್ಯೆ,ಇನ್ಕ್ರಮೆಂಟ್,ಟೈಂ ಬಾಂಡ್,ಇನ್ನಿತರ ವಿಷಯಗಳ ಬಗೆಗೆ ವಿಸ್ತೃತವಾಗಿ ಚರ್ಚಿಸಿ,ಕ್ಷೇತ್ರಶಿಕ್ಷಣಾಧಿಕಾರಿಗಳನ್ನು ಹಾಗೂ ಉಪನಿರ್ದೇಶಕರನ್ನು ಭೇಟಿ ಮಾಡಿ ಅವರ ಬಳಿ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸಲು ತೀರ್ಮಾನಿಸಲಾಯಿತು.ತಾಲ್ಲೂಕಿನ ಎಲ್ಲಾ ಪ್ರೌಢಶಾಲೆಗಳಿಗೆ ಭೇಟಿ ನೀಡಿ ಸಹಶಿಕ್ಷಕರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಅವರ ಬಳಿ ತೆರಳಿ, ಸಮಸ್ಯೆ ಪರಿಹಾರ ಮಾಡುವ ವಿನೂತನ ಯೋಜನೆಯ ಬಗೆ ರೂಪಿಸುವುದು, ಸೋಮವಾರಪೇಟೆ ತಾಲ್ಲೂಕಿನ ಪದಾಧಿಕಾರಿಗಳು ತಾಲ್ಲೂಕಿನ ಕಾರ್ಯಕಾರಿಣಿಯನ್ನು ಶನಿವಾರಸಂತೆ,ಕುಶಾಲನಗರ, ಹಾಗೂ ಸೋಮವಾರಪೇಟೆಯಲ್ಲಿ ನಡೆಸಲು ತೀರ್ಮಾನ ಮಾಡಲಾಯಿತು. ಜೂಮ್ ಮೀಟಿಂಗ್ ಮುಖಾಂತರ ತಿಂಗಳಿಗೊಮ್ಮೆ ಸಭೆ ನಡೆಸುವುದು,ಸದಸ್ಯತ್ವ ಶುಲ್ಕವನ್ನು ಆಯಾ ಭಾಗದ ಪದಾಧಿಕಾರಿಗಳು ಸಂಗ್ರಹಿಸಲು ತೀರ್ಮಾನ ಮಾಡಲಾಯಿತು.ಸಂಘದಲ್ಲಿರುವ ಹಣಕಾಸು,ಎಲ್.ಬಿ.ಎ ಹಾಗೂ ಎಫ್.ಎಲ್ ಎನ್ ಬಗೆಗೆ ಚರ್ಚಿಸಲಾಯಿತು.ವರ್ಗಾವಣೆ ಸಮಸ್ಯೆ ಹಾಗೂ ಹೆಚ್ಚುವರಿ ಶಿಕ್ಷಕರ ಸಮಸ್ಯೆ,ತ್ರಿಭಾಷಾ ಸೂತ್ರದ ಪರವಾಗಿ ಹಿಂದಿ ಭಾಷಾ ಶಿಕ್ಷಕರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ನೀಡುವುದಕ್ಕೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ತಾಲ್ಲೂಕು ಅಧ್ಯಕ್ಷರಾದ ರತ್ನಕುಮಾರ್ ಕೆ.ಆರ್,ಕಾರ್ಯದರ್ಶಿಯಾದ ಶೈಲಾ ಟಿ.ವಿ,ಜಿಲ್ಲಾ ಖಜಾಂಚಿಯಾದ ಎ.ಸಿ ಮಂಜುನಾಥ,ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ದಯಾನಂದ ಪ್ರಕಾಶ್,ವಿಭಾಗೀಯ ಕಾರ್ಯದರ್ಶಿಯವರಾದ ನವೀನ್, ರಾಜ್ಯಪರಿಷತ್ ಸದಸ್ಯರಾದ ಕೆ ಪಿ ಜಯಕುಮಾರ್,ಸರ್ಕಾರಿ ನೌಕರರ ಸಂಘದ ನಿರ್ದೇಶಕರು ಹಾಗೂ ಉಪಾಧ್ಯಕ್ಷರಾದ ಯಶ್ವಂತ್, ಖಜಾಂಚಿಯವರಾದ ಕವಿತಾ,ಅನುದಾನಿತ ಶಿಕ್ಷಣ ಸಂಘದ ತಾಲ್ಲೂಕು ಅಧ್ಯಕ್ಷರಾದ ವೆಂಕಟನಾಯಕ್,ಪದಾಧಿಕಾರಿಗಳಾದ ಶ್ರೀಕಾಂತ್,ಪ್ರಕಾಶ್,ಶಿವಕುಮಾರಿ,ಮಂಗಳಾ ಮೇಡಮ್ ಎಲ್ಲರೂ ಭಾಗವಹಿಸಿದ್ದರು..