ಫೆ. 9ರಂದು ಆಯೋಜಿಸಿರುವ 9ನೇ ಸೋಮವಾರಪೇಟೆ ತಾಲೂಕು ಸಮ್ಮೇಳನಕ್ಕೆ ಅಗತ್ಯ ಸಿದ್ಧತೆಗಳ ಕುರಿತು ವಿವಿಧ ಸಮಿತಿಗಳ ಸಭೆ

Dec 18, 2025 - 12:46
Dec 18, 2025 - 13:12
 0  379
ಫೆ. 9ರಂದು ಆಯೋಜಿಸಿರುವ 9ನೇ ಸೋಮವಾರಪೇಟೆ ತಾಲೂಕು ಸಮ್ಮೇಳನಕ್ಕೆ ಅಗತ್ಯ ಸಿದ್ಧತೆಗಳ ಕುರಿತು ವಿವಿಧ ಸಮಿತಿಗಳ ಸಭೆ

ಸೋಮವಾರಪೇಟೆ: ಐಗೂರು ಗ್ರಾಮದಲ್ಲಿ ಫೆ. 9ರಂದು ಆಯೋಜಿಸಿರುವ 9ನೇ ಸೋಮವಾರಪೇಟೆ ತಾಲೂಕು ಸಮ್ಮೇಳನಕ್ಕೆ ಅಗತ್ಯ ಸಿದ್ಧತೆಗಳ ಕುರಿತು ವಿವಿಧ ಸಮಿತಿಯ ಪದಾಧಿಕಾರಿಗಳೊಂದಿಗೆ ಐಗೂರಿನ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಈಚೆಗೆ ಸಭೆ ನಡೆಸಲಾಯಿತು. ಸಮ್ಮೇಳನದ ಅಧ್ಯಕ್ಷರ ಆಯ್ಕೆ, ಹೋಬಳಿ ಮಟ್ಟದಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕುರಿತು ಸದಸ್ಯರುಗಳು ಸಲಹೆ ನೀಡಿದರು.

 ಹಾಗೂ ಸ್ಮರಣ ಸಂಚಿಕೆಗೆ ಲೇಖನಗಳನ್ನು ಆಹ್ವಾನಿಸುವ ಕುರಿತು ಚರ್ಚಿಸಲಾಯಿತು. ಈ ಸಂದರ್ಭ ಹಣಕಾಸು ಸಮಿತಿಯ ಅಧ್ಯಕ್ಷ ಕೆ.ಪಿ.ರಾಯ್ ಅವರಿಗೆ ರಸೀದಿ ಪುಸ್ತಕಗಳನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಡಿ.ವಿಜೇತ್ ಹಸ್ತಾಂತರಿಸಿದರು. ಸಭೆಯ ಅಧ್ಯಕ್ಷತೆಯನ್ನು ವಿಜೇತ್ ವಹಿಸಿದ್ದರು. ಕಾರ್ಯದರ್ಶಿ ಜ್ಯೋತಿ ಅರುಣ್, ಖಜಾಂಚಿ ಕೆ.ಪಿ.ದಿನೇಶ್ ಹಾಗೂ ವಿವಿಧ ಸಮಿತಿಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು ಮತ್ತು ಸದಸ್ಯರು ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0