ಮೇಕೇರಿ:ಮರದಿಂದ ಬಿದ್ದು ವ್ಯಕ್ತಿ ಸಾವು
admincoorgdaily

ಮಡಿಕೇರಿ,ಡಿ19: ಕೆಲಸಕ್ಕೆ ತೆರಳಿದ ವ್ಯಕ್ತಿ ಮರದಿಂದ ಬಿದ್ದು ಮೃತಪಟ್ಟ ಘಟನೆ ನಡೆದಿದೆ.ನೆಲ್ಲಿಹುದಿಕೇರಿ ಸಮೀಪದ ನಲ್ವತ್ತೇಕರೆ ಬರಡಿ ನಿವಾಸಿ ಸನಿಲ್ (34) ಮೃತ ದುರ್ದೈವಿ. ಮೇಕೇರಿಗೆ ಮರ ಕೆಲಸಕ್ಕೆ ತೆರಳಿದ ಸನಿಲ್ ಮರದಿಂದ ಬಿದ್ದು ತೀವ್ರ ಗಾಯಗೊಂಡಿದ್ದರು. ಕೂಡಲೇ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.