ಮಿಹ್ರಜಾನುಲ್ ಬಿದಾಯ;ಕಡಂಗದಲ್ಲಿ ಮದ್ರಸ ಪ್ರಾರಂಭೋತ್ಸವ
admincoorgdaily

ಕಡಂಗ; ಮನ್ಶ ಉಲ್ ಉಲೂಂ ಮದ್ರಸ ಕಡಂಗದಲ್ಲಿ ಪ್ರಸ್ತುತ ಅಧ್ಯಯನ ವರ್ಷದ ಮಿಹ್ರಜಾನುಲ್ ಬಿದಾಯ ಮದ್ರಸ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಜೆ.ಎಂ ಅಧ್ಯಕ್ಷರಾದ ಕುಞ್ಞಬ್ದುಲ್ಲಾ ವಹಿಸಿದ್ದರು.
ಉಧ್ಘಾಟನೆಯನ್ನು ಮಹಲ್ ಖತೀಬರಾದ ಇರ್ಶಾದ್ ನಿಝಾಮಿ ಮನ್ನಾನಿ ಕೊಲ್ಲಂ ರವರು ಮಾಡಿದರು. ಕಾರ್ಯಕ್ರಮದ ಕುರಿತು ಮದ್ರಸ ಪ್ರಾಂಶುಪಾಲರಾದ ಸುಹೈಬ್ ಫೈಝಿ ಮಾತನಾಡಿದರು.
.ಕಾರ್ಯಕ್ರಮದಲ್ಲಿ ಎಂ.ಜೆ.ಎಂ ಕೋಶಾಧಿಕಾರಿ ರಝಾಖ್,ಮಾಜಿ ಕಾರ್ಯದರ್ಶಿ ಮಮ್ಮು,ಅಧ್ಯಾಪಕರಾದ ಅನ್ಸಬ್ ಅಝ್ಹರಿ ಹಾಗೂ ಜಮಾಅತ್ ಸಮಿತಿ ಪದಾಧಿಕಾರಿಗಳು ಹಾಗೂ ಪೋಷಕರು,ವಿದ್ಯಾರ್ಥಿಗಳು ಹಾಜರಿದ್ದರು. ಕಾರ್ಯಕ್ರಮಕ್ಕೆ ಸ್ವಾಗತವನ್ನು ಉಸ್ಮಾನ್ ಮುಸ್ಲಿಯಾರ್ ಕೋರಿದರು.