Kodagu

ಮಿನಿ ಉದ್ಯೋಗ ಮೇಳಕ್ಕೆ ಚಾಲನೆ

admincoorgdaily

ಮಿನಿ ಉದ್ಯೋಗ ಮೇಳಕ್ಕೆ ಚಾಲನೆ

ಮಡಿಕೇರಿ.ಆ.18: ಗ್ಯಾರಂಟಿ ಅನುಷ್ಠಾನ ಸಮಿತಿಯ ವತಿಯಿಂದ ಪೊನ್ನಂಪೇಟೆ ತಾಲ್ಲೂಕು ಪಂಚಾಯಿತಿ ಸಾಮಾರ್ಥ್ಯ ಸೌಧದಲ್ಲಿ ಮಿನಿ ಉದ್ಯೋಗ ಮೇಳಕ್ಕೆ ಪೊನ್ನಂಪೇಟೆ ತಹಶೀಲ್ದಾರ್ ಸಿ.ಎಸ್.ಸಂಜನಾ ರವರು ದೀಪಾ ಬೆಳುಗುವ ಮೂಲಕ‌ಚಾಲನೆ ನೀಡಿದರು. 

 ನಂತರ ಮಾತನಾಡಿ ಮುಂದಿನ ಭವಿಷ್ಯ ಚೆನ್ನಾಗಿರಬೇಕು ಅಂದರೆ ದುಡಿಮೆ ದಾರಿ, ಮಿನಿ ಉದ್ಯೋಗ ಮೇಳವು ಉದ್ಯೋಗಕಾಂಕ್ಷಿಗಳಿಗೆ ಒಂದು ಒಳ್ಳೆಯ ವೇದಿಕೆಯಾಗಿದೆ ಭವಿಷ್ಯ ರೂಪಿಸಿಕೊಳ್ಳಲು ಒಂದು ಒಳ್ಳೆ ಅವಕಾಶ ಎಂದರು.

       ತಾಲ್ಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಪ್ರಶಾಂತ್ ರವರು ಮಾತನಾಡಿ ಪಂಚ ಗ್ಯಾರಂಟಿ ಯೋಜನೆಗಳು ತಾಲ್ಲೂಕಿನಲ್ಲಿ ಯಶಸ್ವಿಯಾಗಿ ಅನುಷ್ಥಾನಗೊಳ್ಳುತ್ತಿದೆ, ಅದೇ ರೀತಿ ಯುವ ನಿಧಿ ಯೋಜನೆಯು ಕೂಡ ಉತ್ತಮವಾಗಿ ಅನುಷ್ಥಾನಗೊಳ್ಳುತ್ತಿದ್ದು ಇಂದು ಯುವ ಶಕ್ತಿಯೇ ದೇಶವನ್ನು ಮುನ್ನಡೆಸಬೇಕಾಗಿದೆ. ಅದ್ದರಿಂದ ಯಾರು ಸಹ ನಿರುದ್ಯೋಗದಂತಹ ಕಠಿಣ ಸಮಸ್ಯೆಗೆ ಒಳಗಾಗಬಾರದು , ಉದ್ಯೋಗ ಆಕಾಂಕ್ಷಿಗಳಿಗೆ ಉದ್ಯೋಗ ದೊರಕಿಸಿಕೊಡುವಲ್ಲಿ ತಮ್ಮ ಪ್ರಯತ್ನ ಸದಾ ಸಿದ್ದರಿದ್ದೇವೆ ಎಂದರು.

   ಪೊನ್ನಂಪೇಟೆ ತಾಲ್ಲೂಕಿನಲ್ಲಿ ಮಿನಿ ಉದ್ಯೋಗ ಮೇಳವನ್ನು ಆಯೋಜಿಸಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಪ್ರಶಾಂತ್ ಅವರು ಕರೆ ನೀಡಿದರು. 

ಮಿನಿ ಉದ್ಯೋಗ ಮೇಳದಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಒಂದು ಉತ್ತಮ‌ ವೇದಿಕೆಯಾಗಿದ್ದು ಹಲವಾರು ಪ್ರತಿಷ್ಠಿತ ಕಂಪನಿಗಳು ಭಾಗವಹಿಸಿದ್ದು, ನಿಮ್ಮ‌ ಕನಸಿನ ಉದ್ಯೋಗವನ್ನು ಪಡೆದುಕೊಳ್ಳಿ ಎಂದು ವಿರಾಜಪೇಟೆ ತಾ.ಪಂ.ಇ.ಒ.ರಾಜೇಶ್ ಅವರು ಹೇಳಿದರು.

 ಮಿನಿ ಉದ್ಯೋಗ ಮೇಳದಲ್ಲಿ ಪ್ರತಿಷ್ಠಿತ 8 ರಿಂದ 10 ಕಂಪನಿಗಳು ಭಾಗವಹಿಸಿದ್ದವು, ಸುಮಾರು 53 ಉದ್ಯೋಗಾಕಾಂಕ್ಷಿಗಳು ನೇರ ಸಂದರ್ಶನದಲ್ಲಿ ಭಾಗವಹಿಸಿದ್ದರು.

  ಉದ್ಯೋಗ ಮೇಳದಲ್ಲಿ ಪೊನ್ನಂಪೇಟೆ ಗ್ಯಾರಂಟಿ ಸಮಿತಿಯ ಸದಸ್ಯರುಗಳು, ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ಸಿ.ಬಿ.ಮಂಜುನಾಥ್, ಪೊನ್ನಂಪೇಟೆ ಯೋಜನಾಧಿಕಾರಿಗಳಾದ ನಂದೀಶ್, ತಾಲ್ಲೂಕು ಉದ್ಯೋಗ ಸಂಯೋಜಕರಾದ ಮದನ್ ಇತರರು ಉಪಸ್ಥಿತರಿದ್ದರು.