Kodagu

ಸಚಿವ ಪಿ .ಎಂ. ನರೇಂದ್ರಸ್ವಾಮಿಗೆ ಕುಶಾಲನಗರದಲ್ಲಿ ಅದ್ಧೂರಿ ಸ್ವಾಗತ

admincoorgdaily

ಸಚಿವ ಪಿ .ಎಂ. ನರೇಂದ್ರಸ್ವಾಮಿಗೆ ಕುಶಾಲನಗರದಲ್ಲಿ ಅದ್ಧೂರಿ ಸ್ವಾಗತ

ಕುಶಾಲನಗರ;ರಾಜ್ಯದಲ್ಲಿ ಅತಿವೃಷ್ಟಿ ಮತ್ತು ಬರ ಪರಿಸ್ಥಿತಿ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಸರ್ಕಾರವು ಕೊಡಗು ಜಿಲ್ಲೆಯ ಪರಿಶೀಲನಾ ಉಸ್ತುವಾರಿ ಜವಾಬ್ದಾರಿಯನ್ನು ಸಚಿವ ಡಿ.ಎಂ. ನರೇಂದ್ರಸ್ವಾಮಿ ಅವರಿಗೆ ವಹಿಸಿದೆ. ಜಿಲ್ಲೆಗೆ ಆಗಮಿಸಿರುವ ಸಚಿವರಿಗೆ ಕುಶಾಲನಗರ ಹೆಬ್ಬಾಗಿಲು ಕೊಪ್ಪದಲ್ಲಿ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ನೇತೃತ್ವದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು.

ಸಚಿವರು ಇಂದು ಹಾರಂಗಿ ಜಲಾಶಯಕ್ಕೆ ಭೇಟಿ ನೀಡಲಿದ್ದಾರೆ. ಜೊತೆಗೆ ಜಿಲ್ಲೆಯ ಮಳೆ, ಪ್ರವಾಹ ಮತ್ತು ಕೃಷಿ ಹಾನಿ ಪ್ರದೇಶಗಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ ಶಶಿಧರ್ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ ,ಕೆಪಿಸಿಸಿ ಸದಸ್ಯ ಮಂಜುನಾಥ್, ಗುಂಡೂರಾವ್,ಕೆ.ಪಿ ಚಂದ್ರಕಲಾ,ಕೊಡಗು ಕಾಂಗ್ರೆಸ್ ಜಿಲ್ಲಾ ಮಹಿಳಾ ಅಧ್ಯಕ್ಷೆ ಪುಷ್ಪಲತಾ,ಇದ್ದರು.