ಗೋಣಿಕೊಪ್ಪದಲ್ಲಿ ಅಪ್ರಾಪ್ತೆ ಮೇಲೆ ದೌರ್ಜನ್ಯ ಪ್ರಕರಣ: ಆರೋಪಿ ಬಂಧನ
ಗೋಣಿಕೊಪ್ಪ:ಗೋಣಿಕೊಪ್ಪ ಪೊಲೀಸ್ ವ್ಯಾಪ್ತಿಯ ಗೋಣಿಕೊಪ್ಪ ಮಾರ್ಕೆಟ್ ನಲ್ಲಿರುವ ಸಾರ್ವಜನಿಕ ಶೌಚಾಲಯದ ಬಳಿ ಅಪ್ರಾಪ್ತ ಬಾಲಕಿಯ ಮೇಲೆ ದೌರ್ಜನ್ಯ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಈ ಕುರಿತು ದಿನಾಂಕ 28/08/2026 ರಂದು ದೂರು ಸ್ವೀಕರಿಸಿದ್ದ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಮೊ.ಸಂ: 111/2026, ಕಲಂ: 64(2)(ಫ), 65(1) ಬಿಎನ್ಎಸ್ ಮತ್ತು ಕಲಂ 4(1), 6(1) ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.
ಈ ಪ್ರಕರಣದ ಆರೋಪಿ ಕಾಕೇರ ಡಿ. ಭರತ್, 57 ವರ್ಷ, ಕುಂಜಿಲ ಗ್ರಾಮ, ವಿರಾಜಪೇಟೆ ಈತನನ್ನು ದಿನಾಂಕ 30/08/2026 ರಂದು ವಿರಾಜಪೇಟೆಯಲ್ಲಿ ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
