ಕೂಲಿ ಗಲಾಟೆ ವೇಳೆ ಮಿಸ್ ಫೈರ್: ಮಗುವಿನ ತಲೆಗೆ ಗುಂಡು

Jul 24, 2026 - 23:40
 0  98
ಕೂಲಿ ಗಲಾಟೆ ವೇಳೆ ಮಿಸ್ ಫೈರ್: ಮಗುವಿನ ತಲೆಗೆ ಗುಂಡು

ಮೂಡಿಗೆರೆ: ಕೂಲಿ ವಿಚಾರವಾಗಿ ನಡೆದ ಗಲಾಟೆ ವೇಳೆ ತೋಟದ ಮಾಲೀಕ ಹಾರಿಸಿದ ಗುಂಡು ಮಗುವಿನ ತಲೆಗೆ ತಗುಲಿ ಗಂಭೀರವಾಗಿ ಗಾಯಗೊಂಡ ಘಟನೆ ಮೂಡಿಗೆರೆ ತಾಲೂಕಿನ ಬಾಳೆಹಳ್ಳಿ ಗ್ರಾಮದಲ್ಲಿ ನಡೆದಿದೆ. ತೋಟದ ಮಾಲೀಕ ಜಗದೀಶ್ ಗೌಡನ ಮನೆಗೆ ಅಸ್ಸಾಂ ಮೂಲದ ಕಾರ್ಮಿಕರು ಕೆಲಸಕ್ಕೆ ಬಂದಿದ್ದರು.

ಕಾರ್ಮಿಕರು 400 ರೂ. ಕೂಲಿ ಕೇಳಿದ್ದರು. ಆದರೆ ಜಗದೀಶ್ ಗೌಡ "ಈಗ 350 ರೂ. ಕೊಡ್ತೀನಿ, ಆಮೇಲೆ 50 ರೂ. ಕೊಡ್ತೀನಿ" ಎಂದು ತಿಳಿಸಿದ್ದ. ಇದೇ ವಿಚಾರಕ್ಕೆ ಕಾರ್ಮಿಕರು ಹಾಗೂ ಮಾಲೀಕನ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. "ಈಗಲೇ 400 ರೂ. ಕೊಡಿ, ಇಲ್ಲ ಕೆಲಸ ಮಾಡಲ್ಲ" ಎಂದು ಕಾರ್ಮಿಕರು ಹೊರಟಿದ್ದರು.

ಈ ವೇಳೆ ಕಾರ್ಮಿಕರಿಂದ ಮಾಲೀಕರ ಮೇಲೆ ಹಲ್ಲೆಗೆ ಯತ್ನ ನಡೆದಿದೆ ಎನ್ನಲಾಗಿದೆ. ಕಾರ್ಮಿಕರನ್ನು ಹೆದರಿಸಲು ಹೋದಾಗ ಜಗದೀಶ್ ಗೌಡನಿಂದ ಮಿಸ್ ಫೈರ್ ಆಗಿದ್ದು, ಆ ಗುಂಡು ಅಲ್ಲಿದ್ದ ಮಗುವಿನ ತಲೆಗೆ ತಗುಲಿದೆ. ಗಂಭೀರವಾಗಿ ಗಾಯಗೊಂಡ ಮಗುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತು ಮೂಡಿಗೆರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0