Kodagu

ಅತ್ತೂರು ಜ್ಞಾನಗಂಗಾ ಶಾಲೆಯಲ್ಲಿ ಮಿಸ್ಟಿ ಹಿಲ್ಸ್ ನಿಂದ ಹಿರಿಯ ನಾಗರಿಕರ ದಿನಾಚರಣೆ; ಮೊಬೈಲ್ ಗಿಂತ ಶಿಕ್ಷಣಕ್ಕೆ ಮಹತ್ವ ನೀಡಿ ಭೋಜಮ್ಮ ಕಿವಿಮಾತು

admincoorgdaily

ಅತ್ತೂರು ಜ್ಞಾನಗಂಗಾ ಶಾಲೆಯಲ್ಲಿ ಮಿಸ್ಟಿ ಹಿಲ್ಸ್ ನಿಂದ ಹಿರಿಯ ನಾಗರಿಕರ ದಿನಾಚರಣೆ; ಮೊಬೈಲ್ ಗಿಂತ ಶಿಕ್ಷಣಕ್ಕೆ ಮಹತ್ವ ನೀಡಿ  ಭೋಜಮ್ಮ ಕಿವಿಮಾತು

ಮಡಿಕೇರಿ ಆ.21- ಮಕ್ಕಳು ಓದಿನ ಕಡೆ ಹೆಚ್ಚಿನ ಗಮನ ಕೊಡಬೇಕು ಟಿವಿ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಬೇಕು ಟಿವಿಯಲ್ಲಿ ಬರುವ ಒಳ್ಳೆಯ ಕಾರ್ಯಕ್ರಮವನ್ನು ಮಾತ್ರ ನೋಡಬೇಕು ಎಂದು ಅತ್ತೂರಿನ ಹಿರಿಯ ನಾಗರಿಕರಾದ ಕೆ.ಬೋಜಮ್ಮ ಕಿವಿಮಾತು ಹೇಳಿದ್ದಾರೆ.

 ಅತ್ತೂರಿನ ಜ್ಞಾನಗಂಗಾ ವಸತಿ ಶಾಲೆಯಲ್ಲಿ ಜ್ಞಾನ ಗಂಗಾ ಇಂಟರಾಕ್ಟ್ ಕ್ಲಬ್ ಮತ್ತು ರೋಟರಿ ಮಿಸ್ಟಿ ಹಿಲ್ಸ್ ಮಡಿಕೇರಿ ಇವರ ಸಹಯೋಗದೊಂದಿಗೆ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಈ ಕಾಯ೯ಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಬೋಜಮ್ಮ ಮಾತನಾಡಿರು.

ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಎ. ವಿ ಜೋಯಪ್ಪ ಶಿಕ್ಷಣದ ಜತೆಜತೆಗೇ, ಕ್ರೀಡೆಯತ್ತ ಗಮನ ಹರಿಸಬೇಕು , ವಿದ್ಯಾರ್ಥಿಗಳಲ್ಲಿ ಬಹಳಷ್ಟು ಶಿಸ್ತು ಇರಬೇಕು ಶಿಸ್ತು ಇದ್ದಾಗ ಮಕ್ಕಳ ಉತ್ತಮ ಬೆಳವಣಿಗೆಗೆ ಸಹಾಯಕವಾಗುತ್ತದೆ. ಎಲ್ಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಜ್ಞಾನವನ್ನು ಕೊಡುವುದರ ಮೂಲಕ ಉತ್ತಮ ಉದ್ಯೋಗವನ್ನು ಪಡೆದು ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

 ಸನ್ಮಾನ ಸ್ವೀಕರಿಸಿ ಮಾತನಾಡಿದ ಶಂಭುಲಿಂಗಪ್ಪ ವಿದ್ಯಾರ್ಥಿಗಳು ಶಿಕ್ಷಕರು ಹೇಳುವ ಒಳ್ಳೆ ಮಾತುಗಳನ್ನು ಕೇಳಿ ಸನ್ಮಾರ್ಗದಲ್ಲಿ ನಡೆಯುವಂತೆ ಕರೆ ನೀಡಿದರು. ಶಾಲೆಯ ಕಾರ್ಯದರ್ಶಿ ಬಿ. ಎಸ್ ನಿಂಗಪ್ಪ ಮಾತನಾಡಿ, . ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯು ಹಿರಿಯರಾಗಲೇಬೇಕು ಇರುವ ಮನುಷ್ಯನ ಜೀವನದಲ್ಲಿ ಏನಾದರೂ ಸಾಧನೆಯನ್ನು ಮಾಡಲೇಬೇಕು. ಪ್ರತೀಯೋವ೯ ವಿದ್ಯಾಥಿ೯ಯೂ ಪೋಷಕರಿಗೆ, ಹಿರಿಯರಿಗೆ ಗೌರವ ಸಲ್ಲಿಸಿದರೆ ಮಾತ್ರ ಜೀವನದಲ್ಲಿ ಒಳಿತಾಗುತ್ತದೆ ಎಂದರು.ಕಾಡಿನ ನಡುವೇ ಈ ಶಾಲೆಯನ್ನು ಸ್ಥಾಪನೆ ಮಾಡುವಾಗ ನಮ್ಮ ಸುತ್ತಮುತ್ತಲಿನ ಗ್ರಾಮಸ್ಥರು ಬಹಳಷ್ಟು ಸಹಾಯವನ್ನು ಮಾಡಿದರು ಎಂದು ಅವರು ಸ್ಮರಿಸಿಕೊಂಡರು.

ಶಾಲೆಯ ಪ್ರಾಂಶುಪಾಲರಾದ ಸತ್ಯ ಸುಲೋಚನ ಎಸ್. ಎಂ ಹಿರಿಯ ನಾಗರಿಕರ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಹಿರಿಯ ನಾಗರಿಕರ ಮಹತ್ವದ ಬಗ್ಗೆ ವಿದ್ಯಾರ್ಥಿಗಳಾದ ಗಣ್ಯ, ಸುಚೇತ್, ಶಿಶಿರ್ ಭಟ್ ಮಾತನಾಡಿದರು. ಜ್ಞಾನಗಂಗಾ ಶಾಲೆಯ ಅಧ್ಯಕ್ಷ ಟಿ. ಕೆ ಸುಧೀರ್, ವೇದಿಕೆಯಲ್ಲಿದ್ದ ಕಾರ್ಯಕ್ರಮದ ನಿರೂಪಣೆಯನ್ನು ಕನಿಷ್ಕ ನೆರವೇರಿಸಿ, ವಿಶ್ರುತ ಸ್ವಾಗತಿಸಿ, ಶಿಕ್ಷಕಿ ವಿನಿತಾ ಅತಿಥಿ ಪರಿಚಯ ನೆರವೇರಿಸಿದರು. . ವಿದ್ಯಾರ್ಥಿ ಮನ್ವಿತ್ ವಂದಿಸಿದರು. ಸಂಗೀತ ಶಿಕ್ಷಕಿ ರತ್ನಾವತಿ ಹಿರಿಯ ನಾಗರಿಕರನ್ನು ಕುರಿತು ಹಾಡನ್ನು ಹಾಡಿದರು.