Kodagu

ಸಂಚಾರಿ ಪೊಲೀಸರಿಗೆ ಮಿಸ್ಟಿ ಹಿಲ್ಸ್ ನಿಂದ ರೇನ್ ಕೋಟ್ ಕೊಡುಗೆ

admincoorgdaily

ಸಂಚಾರಿ ಪೊಲೀಸರಿಗೆ ಮಿಸ್ಟಿ ಹಿಲ್ಸ್ ನಿಂದ ರೇನ್ ಕೋಟ್ ಕೊಡುಗೆ

ಮಡಿಕೇರಿ ಜು. 11 - ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಮಡಿಕೇರಿಯ ಸಂಚಾರಿ ಪೊಲೀಸ್ ಸಿಬ್ಬಂದಿಗಳಿಗೆ ರೇನ್ ಕೋಟ್ ಗಳನ್ನು ಕೊಡುಗೆಯಾಗಿ ನೀಡಲಾಯಿತು. ರೋಟರಿ ಮಿಸ್ಟಿ ಹಿಲ್ಸ್ ನ ನೂತನ ಆಡಳಿತ ಮಂಡಳಿ ಪದಗ್ರಹಣ ಕಾಯ೯ಕ್ರಮದಲ್ಲಿ ಬೆಂಗಳೂರಿನ 3191 ರೋಟರಿ ಜಿಲ್ಲೆಯ ಸಹಾಯಕ ಗವನ೯ರ್ ಪ್ರಕಾಶ್ ಬೆಳವಡಿ ಮಿಸ್ಟಿ ಹಿಲ್ಸ್ ವತಿಯಿಂದ ನೀಡಲಾದ 10 ರೇನ್ ಕೋಟ್ ಗಳನ್ನು ಸಂಚಾರಿ ಪೊಲೀಸರಿಗೆ ವಿತರಿಸಿದರು.

ಮಳೆಯಲ್ಲಿ ರೇನ್ ಕೋಟ್ ಗಳ ಭದ್ರತೆ ಪೊಲೀಸರಿಗೆ ನೆರವಾಗಲಿದ್ದು, ಸದಾ ಮಳೆ, ಗಾಳಿ, ಛಳಿಯಲ್ಲಿ ಕತ೯ವ್ಯ ನಿವ೯ಹಿಸುತ್ತಿರುವ ಸಂಚಾರಿ ಪೊಲೀಸರಿಗೆ ರೋಟರಿ ಜಿಲ್ಲೆ 3181 ನ ಪ್ರಮುಖ ಯೋಜನೆಯಾಗಿ ರೇನ್ ಕೋಟ್ ಗಳನ್ನು ವಿತರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಸಂಚಾರಿ ಜಾಗ್ರತಿ ಕಾಯ೯ಕ್ರಮಗಳನ್ನು ವಿವಿಧೆಡೆ ಆಯೋಜಿಸಲಾಗುತ್ತದೆ ಎಂದು ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪಿ.ಆರ್. ರಾಜೇಶ್ ಮಾಹಿತಿ ನೀಡಿದರು.

 ರೋಟರಿ ಸಹಾಯಕ ಗವನ೯ರ್ ಹೆಚ್.ಎಸ್. ವಸಂತ್ ಕುಮಾರ್, ವಲಯ ಸೇನಾನಿ ಪೊನ್ನಚ್ಚನ ಮಧುಸೂದನ್ , ಕಾಯ೯ದಶಿ೯ ಡಾ.ಜಿ.ಡಿ.ಚೇತನ್ , ಮಿಸ್ಟಿ ಹಿಲ್ಸ್ ನ ಜಿಲ್ಲಾ ಸಂಚಾರಿ ಯೋಜನಾ ಸಮಿತಿ ನಿದೇ೯ಶಕ ಎಸ್.ಎಂ. ಚೇತನ್ ಹಾಜರಿದ್ದರು.