ಅಂಗನವಾಡಿ ಕೇಂದ್ರಗಳಿಗೆ ಮಿಸ್ಟಿ ಹಿಲ್ಸ್ ವತಿಯಿಂದ ಕೊಡುಗೆ

Feb 4, 2026 - 17:22
 0  375
ಅಂಗನವಾಡಿ ಕೇಂದ್ರಗಳಿಗೆ ಮಿಸ್ಟಿ ಹಿಲ್ಸ್ ವತಿಯಿಂದ ಕೊಡುಗೆ

ಮಡಿಕೇರಿ ಫೆ. 04 - ಮಡಿಕೇರಿ ತಾಲೂಕಿನ ವಿವಿಧ ಅಂಗನವಾಡಿ ಕೇಂದ್ರಗಳಿಗೆ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಗತ್ಯ ಉಪಕರಣಗಳು, ಆಟಿಕೆಗಳನ್ನು ಕೊಡುಗೆಯಾಗಿ ನೀಡಲಾಯಿತು.

ಮಡಿಕೇರಿ ತಾಲೂಕಿನ ಕಗ್ಗೋಡ್ಲು, ಸುಭಾಷ್ ನಗರ, ಹೂಕಾಡು ಸೈಸಾರಿಯ ಅಂಗನವಾಡಿ ಕೇಂದ್ರಗಳಿಗೆ ರೋಟರಿ ಜಿಲ್ಲೆಯ ರಾಜ್ಯಪಾಲ ಪಿ.ಕೆ. ರಾಮಕೖಷ್ಣ, ಉಪರಾಜ್ಯಪಾಲ ಧಿಲನ್ ಚಂಗಪ್ಪ, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ ವಿವಿಧ ಆಟಿಕೆಗಳು, ಅಗತ್ಯ ಉಪಕರಣಗಳನ್ನು ಕೊಡುಗೆಯಾಗಿ ನೀಡಿದರು. ಕೊಡಗಿನಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಸ್ವಚ್ಚತೆ ನಿವ೯ಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪಿ.ಕೆ. ರಾಮಕೖಷ್ಣ, ಮಕ್ಕಳಿಗೆ ಬಾಲ್ಯದಲ್ಲಿಯೇ ಶುಚಿತ್ವದ ತಿಳುವಳಿಕೆ ನೀಡುವ ಕಾಯ೯ ಶ್ಲಾಘನೀಯ ಎಂದರು.

 ಈ ಸಂದಭ೯ ರೋಟರಿ ಮಿಸ್ಟಿ ಹಿಲ್ಸ್ ಕಾಯ೯ದಶಿ೯ ಬಿ.ಕೆ. ಕಾಯ೯ಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೖದ್ದಿ ಇಲಾಖೆಯ ಅಧಿಕಾರಿ ಮೇಪಾಡಂಡ ಸವಿತಾ ಕೀತ೯ನ್, ಅಂಗನವಾಡಿ ಕಾಯ೯ಕತೆ೯ಯರಾದ ಜಯಶ್ರೀ ರೈ, ವೀಣಾ, ಸರಸ್ವತಿ, ಸಹಾಯಕಿ ಲೀಲಾ, ಪ್ರೇಮ, ರೋಟರಿ ಮಿಸ್ಟಿ ಹಿಲ್ಸ್ ನಿದೇ೯ಶಕರು, ಸದಸ್ಯರು ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0