ಸ್ವಾತಂತ್ರ್ಯೋತ್ಸವದ ಅಂಗವಾಗಿ ಮೀತಲತಂಡ ಹಸನ್ ಅವರಿಗೆ ಸನ್ಮಾನ
admincoorgdaily
ಕಡಂಗ: ಸ್ವಾತಂತ್ರೋತ್ಸವದ ಪ್ರಯುಕ್ತ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಯೋಧರಿಗೆ ನೀಡಲಾಗುವ ಗೌರವಕ್ಕೆ ನಿವೃತ ಸುಬೇದಾರ್ ಗುಂಡಿಕೆರೆಯ ಮೀತಲತಂಡ ಹಸನ್ ಹಾಜಿ ಅವರು ಪಾತ್ರರಾಗಿದ್ದಾರೆ. ವಿರಾಜಪೇಟೆಯ ತಾಲೂಕು ಆಡಳಿತ ವತಿಯಿಂದ ತಾಲೂಕು ಮೈದಾನದಲ್ಲಿ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆಯ ಸಮಾರಂಭದಲ್ಲಿ ಹಸನ್ ಅವರನ್ನು ವಿರಾಜಪೇಟೆ ಶಾಸಕರಾದ ಎ ಎಸ್ ಪೊನ್ನಣ್ಣನವರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. 1970 ರಲ್ಲಿ ಭಾರತೀಯ ಸೇನೆಯ ಎ.ಎಸ್. ಸಿ. ವಿಭಾಗಕ್ಕೆ ಸೇರ್ಪಡೆಗೊಂಡ ಇವರು ರಾಜಸ್ಥಾನ್, ಪಂಜಾಬ್, ದೆಹಲಿ, ಜಮ್ಮು-ಕಾಶ್ಮೀರ ಸೇರಿದಂತೆ ದೇಶದ ವಿವಿಧೆಡೆಗಳಲ್ಲಿ 24 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
ವರದಿ: ನೌಫಲ್