ನೇಪಾಳದಲ್ಲಿ ಚಿನ್ನದ ಪದಕ ಗೆದ್ದ ಸೋಮವಾರಪೇಟೆ ಶಾಲೆಯ ವಿದ್ಯಾರ್ಥಿ ಮೊಹಮ್ಮದ್ ಹಫೀಸ್
admincoorgdaily

ಮಡಿಕೇರಿ ಆ.22 : ನೇಪಾಳದ ಕಠ್ಮಂಡುವಿನಲ್ಲಿ ನಡೆದ 3ನೇ ವಿಶ್ವ ಮಿಕ್ಸಡ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಸೋಮವಾರಪೇಟೆಯ ಪಿಎಂ ಶ್ರೀ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಮೊಹಮ್ಮದ್ ಹಫೀಸ್ ಭರ್ಜರಿ ಸಾಧನೆ ಮಾಡಿ ಚಿನ್ನದ ಪದಕ ಗೆದ್ದಿದ್ದಾನೆ.
ಬಜೆಗುಂಡಿಯ ಅಬ್ದುಲ್ ಖಾದರ್ ಹಾಗೂ ರೈಯಾನ ದಂಪತಿಯ ಪುತ್ರ ಮೊಹಮ್ಮದ್ ಹಫೀಸ್, ಅತಿ ಚಿಕ್ಕ ವಯಸ್ಸಿನಲ್ಲೇ ಅಂತರರಾಷ್ಟ್ರೀಯ ಮಟ್ಟದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ದೇಶ, ರಾಜ್ಯ ಹಾಗೂ ಕೊಡಗು ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ಮೊಹಮ್ಮದ್ ಹಫೀಸ್ ಸಾಧನೆಗೆ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಹಾಗೂ ಸ್ಥಳೀಯರು ಹರ್ಷ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ.
ಮುಂದಿನ ದಿನಗಳಲ್ಲಿ ಇನ್ನಷ್ಟು ಎತ್ತರದ ಸಾಧನೆಗಳನ್ನು ಮಾಡಲಿ ಎಂದು ಶುಭ ಹಾರೈಸಿದ್ದಾರೆ. ಈತ ಬಾಕ್ಸಿಂಗ್ ನಲ್ಲಿ 2025 ರಲ್ಲಿ ಮಹಾರಾಷ್ಟçದಲ್ಲಿ ಚಿನ್ನದ ಪದಕ ಹಾಗೂ ಕೊಯಮತ್ತೂರಿನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾನೆ.