ಮೂರ್ನಾಡು:ತೋಟದ ಲೈನ್ ಮನೆಯಲ್ಲಿ ಗಾಂಜಾ ಮಾರಾಟ,ಅಸ್ಸಾಂ ಮೂಲದ ಮೂವರ ಬಂಧನ

ಮೂರ್ನಾಡು:ತೋಟದ ಲೈನ್ ಮನೆಯಲ್ಲಿ ಗಾಂಜಾ ಮಾರಾಟ,ಅಸ್ಸಾಂ ಮೂಲದ ಮೂವರ ಬಂಧನ

ಮಡಿಕೇರಿ:ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಂತೂರು-ಮೂರ್ನಾಡು ಗ್ರಾಮದಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ/ಸರಬರಾಜು ಮಾಡುತ್ತಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಯಶಸ್ವಿಯಾಗಿದೆ.

ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಮಾರಾಟದ ಬಗ್ಗೆ ನಮ್ಮ ಕಛೇರಿ /ಠಾಣೆಗಳಿಗೆ ಸಾರ್ವಜನಿಕರಿಂದ ದೂರು ಬರುತ್ತಿದ್ದು, ನಿಷೇಧಿತ ಮಾದಕ ವಸ್ತುಗಳ ಮಾರಾಟ/ಸರಬರಾಜು/ ಬಳಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ದಿನಾಂಕ: 04-01-2026 ರಂದು ಕಾಂತೂರು-ಮೂರ್ನಾಡು ಗ್ರಾಮದ ನಿವಾಸಿ ಸಂದೇಶ್ ರವರ ತೋಟದ ಲೈನ್ ಮನೆಯಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ/ಸರಬರಾಜು ಮಾಡುವ ಕುರಿತು ಖಚಿತ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆಸಿ ಅಸ್ಸಾಂ ರಾಜ್ಯ ಧರಾಂಗ್ ಜಿಲ್ಲೆ ಮೂಲದ ಕಾಂತೂರು-ಮೂರ್ನಾಡು ಗ್ರಾಮದ ನಿವಾಸಿ ಸಂದೇಶ್ ರವರ ತೋಟದ ಲೈನ್ ಮನೆಯಲ್ಲಿ 03 ಜನರನ್ನು ನಿಷೇಧಿತ ಮಾದಕ ವಸ್ತುವಿನೊಂದಿಗೆ ದಸ್ತಗಿರಿ ಮಾಡಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 20(b)(ii)(A)NDPS Act ಅಡಿಯಲ್ಲಿ ಪ್ರಕರಣ ದಾಖಲಿಸಿ ಘನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಆರೋಪಿಗಳ ವಿವರ;

1. ಅಜೀಮ್ ಆಲಿ, 19 ವರ್ಷ. ಧರಾಂಗ್ ಜಿಲ್ಲೆ, ಅಸ್ಸಾಂ ರಾಜ್ಯ

2. ಸೈಫುಲ್ ಇಸ್ಲಾಂ, 31 ವರ್ಷ ಧರಾಂಗ್ ಜಿಲ್ಲೆ, ಅಸ್ಸಾಂ ರಾಜ್ಯ

3. ಕಾನೂನು ಸಂಘರ್ಷಕ್ಕೆ ಒಳಗಾದ ಅಪ್ರಾಪ್ತ ಬಾಲಕ.

ವಶಪಡಿಸಿಕೊಂಡ ಸ್ವತ್ತುಗಳ ವಿವರ;

1. 01 8.22 420 ಜೋಡಿ ಪೋಸ್ಟ್‌ಗಳು

2. . 850/-ನಗದು

3. 01 ಗಾಂಜಾ ಸೇದುವ ಕೊಳವೆ