Kodagu

ತಲಕಾವೇರಿ ಗ್ರಾಮದಲ್ಲಿ ಕೆರೆಗೆ ಬಿದ್ದು ತಾಯಿ-ಮಗಳು ದುರ್ಮರಣ

admincoorgdaily

ತಲಕಾವೇರಿ ಗ್ರಾಮದಲ್ಲಿ ಕೆರೆಗೆ ಬಿದ್ದು ತಾಯಿ-ಮಗಳು ದುರ್ಮರಣ

ಭಾಗಮಂಡಲ, ಸೆ.1: ಸಮೀಪದ ತಲಕಾವೇರಿ ಗ್ರಾಮದಲ್ಲಿ ತಾಯಿ ಮತ್ತು ಮಗಳು ಕೆರೆಗೆ ಬಿದ್ದು ಮೃತಪಟ್ಟಿರುವ ದುರಂತ ಘಟನೆ ಸೋಮವಾರ ಸಂಜೆ ನಡೆದಿದೆ. ಮೃತರನ್ನು ತಲಕಾವೇರಿ ಗ್ರಾಮದ ಪ್ರೇಮ (45) ಮತ್ತು ಅವರ ಪುತ್ರಿ ಪ್ರಿಯಾಂಕ (14) ಎಂದು ಗುರುತಿಸಲಾಗಿದೆ.

ಮನೆಯಲ್ಲಿ ನಡೆದ ಮಾತಿನ ಚಕಮಕಿಯಿಂದ ಬೇಸರಗೊಂಡು ಪುತ್ರಿ ಮನೆಯಿಂದ ಹೊರನಡೆದಿದ್ದು, ಆಕೆಯನ್ನು ಹುಡುಕಿಕೊಂಡು ಹೋದ ತಾಯಿಯೂ ಕೆರೆ ಬಳಿ ತೆರಳಿದ್ದ ವೇಳೆ ಈ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಸ್ಥಳೀಯರು ಇಬ್ಬರನ್ನು ರಕ್ಷಿಸಲು ಯತ್ನಿಸಿದರೂ ಪ್ರಯತ್ನ ಫಲಿಸಲಿಲ್ಲ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಈ ಸಂಬಂಧ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.