ಪರ್ವತಾರೋಹಿ ಡಾ. ಬಿ.ಎಂ.ಲತಾ ರವರಿಗೆ ಅಕ್ಕನ ಬಳಗದವತಿಯಿಂದ ಸನ್ಮಾನ

Jan 8, 2026 - 12:58
 0  482
ಪರ್ವತಾರೋಹಿ ಡಾ. ಬಿ.ಎಂ.ಲತಾ ರವರಿಗೆ ಅಕ್ಕನ ಬಳಗದವತಿಯಿಂದ ಸನ್ಮಾನ

ಸೋಮವಾರಪೇಟೆ:-ಪರ್ವತಾರೋಹಿ ಡಾ. ಬಿ.ಎಂ.ಲತಾ ರವರನ್ನು ಅಕ್ಕನಬಳಗದವತಿಯಿಂದ ಸನ್ಮಾನಿಸಲಾಯಿತು.

 ತಾಲೂಕಿನ ಆಲೂರುಸಿದ್ದಾಪುರ ಸಮೀಪದ ತಪೋಕ್ಷೇತ್ರ ಮನೆಹಳ್ಳಿ ಮಠದಲ್ಲಿ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಸೋಮವಾರಪೇಟೆ ಅಕ್ಕನಬಳಗದo ಪದಾಧಿಕಾರಿಗಳು ಶ್ರೀಮತಿ.ಲತಾ ರವರನ್ನು ಶಾಲುಹೂದಿಸಿ,ಪಲತಂಬೂಲ ನೀಡಿ ಗೌರವಿಸಿದರು.

 ಮೂಲತಃ ಬಡುಬನ ಹಳ್ಳಿ ಗ್ರಾಮದವರಾದ ಲತಾ ಬೆಂಗಳೂರಿನಲ್ಲಿ ಸ್ತ್ರೀರೋಗ ತಜ್ಞರಾಗಿದ್ದಾರೆ.57 ವರ್ಷದ ಪ್ರಾಯದ ಇವರು ಇತ್ತೀಚೆಗೆ ಎವರೆಸ್ಟ್ ಬೆಸ್ಕ್ಯಾಂಪ್ ಮೂಲಕ ಪರ್ವತವೇರಿ 18,514ಅಡಿ ಎತ್ತರದ ಕಾಲಾಪತ್ತರ್ ಎಂಬ ಸ್ಥಳ ಕ್ರಮಿಸಿ ಸಾಹಸಮೆರೆದಿದ್ದರು. ವೃತ್ತಿಯಲ್ಲಿ ವೈದ್ಯರಾದರೂ ಮೆರಾತಾನ್ ಓಟ,ಇನ್ನಿತರೆ ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವ ಇವರು,ಈಗಾಗಲೇ 86ದೇಶಗಳಿಗೆ ಭೇಟಿಕೊಟ್ಟು ಅಲ್ಲಿನ ಜನಜೀವನ ಹಾಗೂ ಸಂಸ್ಕೃತಿಯ ಬಗ್ಗೆ ಅಧ್ಯಯನ ನಡೆಸಿದ್ದಾರೆ.

 ಸನ್ಮಾನ ಸಂದರ್ಭ ಮನೆಹಳ್ಳಿ ಮಠದ ಶ್ರೀ.ಮಹಾಂತ ಶಿವಲಿಂಗ ಸ್ವಾಮೀಜಿ,ವೀರಶೈವ ಲಿಂಗಾಯತ ಸಂಘಟನಾವೇದಿಕೆಯ ರಾಷ್ಟ್ರೀಯ ಕಾರ್ಯದರ್ಶಿಎಸ್.ಮಹೇಶ್, ಅಕ್ಕನ ಬಳಗದ ಅಧ್ಯಕ್ಷೆ ಗೀತಾರಾಜು,ಕಾರ್ಯದರ್ಶಿ ಮಾಯಾಗಿರೀಶ್,ಉಪಾಧ್ಯಕ್ಷೆ ಸರಿತ ಮಲ್ಲಿಕಾರ್ಜುನ,ಸದಸ್ಯರುಗಳಾದ ಅನುಪಮ ಹಾಗೂ ಜಗದಾಂಬ,ತಪೋಕ್ಷೇತ್ರ ಸೇವಾ ಟ್ರಸ್ಟ್ ನ ಸದಸ್ಯರುಗಳಾದ ಪ್ರಕಾಶ್,ನಾರಾಯಣ,ಮಂಜುನಾಥ,ಮತ್ತಿತರರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0