ಶಾಸಕ ಎಎಸ್ ಪೊನ್ನಣ್ಣ ಅವರನ್ನು ಭೇಟಿಯಾದ ಮಿಸ್ಟರ್ ಇಂಡಿಯಾ ಯೂನಿವರ್ಸ್ ಪ್ರಶಸ್ತಿ ವಿಜೇತ ಬಿಷನ್ ಮಾದಪ್ಪ
ವಿರಾಜಪೇಟೆ:ತಾಲೂಕಿನ ಪಾಲಂಗಾಲ ಗ್ರಾಮದ ಮಿಸ್ಟರ್ ಇಂಡಿಯಾ ಯೂನಿವರ್ಸ್ 2025ರ ಪ್ರಶಸ್ತಿ ವಿಜೇತರಾದ ಕರಿನೇರವಂಡ ಬಿಷನ್ ಮಾದಪ್ಪ ರವರು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಸನ್ಮಾನ್ಯ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರನ್ನು ಇಂದು ಭೇಟಿ ಮಾಡಿದರು. ಬಳಿಕ ಶಾಸಕರು ಬಿಷನ್ ರವರಿಗೆ ಶುಭ ಕೋರುತ್ತಾ ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೆ ಏರಲಿ ಎಂದು ಶುಭ ಹಾರೈಸಿದರು.