Kodagu

ಎಮ್ಮೆಮಾಡು; ಮುಸಲ್ಮಾನ ಬಾಂಧವರಿಂದ ರಂಝಾನ್ ಹಬ್ಬಾಚರಣೆ

admincoorgdaily

ಎಮ್ಮೆಮಾಡು; ಮುಸಲ್ಮಾನ ಬಾಂಧವರಿಂದ ರಂಝಾನ್ ಹಬ್ಬಾಚರಣೆ

ವರದಿ:ಝಕರಿಯ ನಾಪೋಕ್ಲು

 ನಾಪೋಕ್ಲು : ನಾಪೋಕ್ಲು ಬಳಿಯ ಎಮ್ಮೆಮಾಡುವಿನ ಜುಮಾ ಮಸೀದಿಯಲ್ಲಿ ಮುಸಲ್ಮಾನ ಭಾಂದವರು ಪವಿತ್ರ ಈದುಲ್ ಫಿತರ್ ರಂಝಾನ್ ಹಬ್ಬವನ್ನು ಸಂಭ್ರಮ ಶ್ರದ್ದಾ ಭಕ್ತಿಯಿಂದ ಆಚರಿಸಿದರು.

ಶುಕ್ರವಾರ ಬೆಳಿಗ್ಗೆ ಎಮ್ಮೆಮಾಡುವಿನ ಜುಮಾ ಮಸೀದಿಯಲ್ಲಿ ಧರ್ಮ ಗುರುಗಳಾದ ರಾಝಿಕ್ ಫೈಝಿ ಅವರ ನೇತೃತ್ವದಲ್ಲಿ ಸಾಮೂಹಿಕ ಈದ್ ನಮಾಜ್ ನೆರವೇರಿಸಲಾಯಿತು.ಬಳಿಕ ಇತಿಹಾಸ ಪ್ರಸಿದ್ಧ ಸೂಫಿ ಶಹೀದ್ ದರ್ಗಾಕ್ಕೆ ತೆರಳಿದ ಸಮುದಾಯ ಬಾಂಧವರು ನಾಡಿನ ಸುಭೀಕ್ಷಕ್ಕಾಗಿ ಮತ್ತು ನಾಡಿನಲ್ಲಿ ಮರಣ ಹೊಂದಿದವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಬಳಿಕ ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಈ ಸಂದರ್ಭ ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾತ್ ಉಪಾಧ್ಯಕ್ಷರಾದ ಚಂಬರಂಡ ಮಾಹಿನ್, ಪ್ರಧಾನ ಕಾರ್ಯದರ್ಶಿ ಝಕರಿಯ ತಂಙಳ್ ಅಲ್ ಹೈದರೂಸಿ,ಎಮ್ಮೆಮಾಡು ಅನಾಥಾಶ್ರಮ ಸಮಿತಿಯ ಸಹ ಕಾರ್ಯದರ್ಶಿ ಬಿ.ಯು.ಅಶ್ರಫ್, ಜಮಾಅತ್ ಆಡಳಿತ ಮಂಡಳಿ ಪದಾಧಿಕಾರಿಗಳು,ಜಮಾಅತ್ ನ ಸರ್ವ ಸದಸ್ಯರು ಪಾಲ್ಗೊಂಡಿದ್ದರು.