ಮೈಸೂರಿನ ಯುವಕ ಕುಶಾಲನಗರದಲ್ಲಿ ಆತ್ಮಹತ್ಯೆ

Aug 17, 2026 - 20:13
 0  995
ಮೈಸೂರಿನ ಯುವಕ ಕುಶಾಲನಗರದಲ್ಲಿ ಆತ್ಮಹತ್ಯೆ

ಕುಶಾಲನಗರ, ಆ.17 : ಮೈಸೂರಿನ ಯುವಕ ಅಭಿಷೇಕ್ (27) ಕುಶಾಲನಗರದ ಲಾಡ್ಜ್ ಒಂದರಲ್ಲಿ ತಂಗಿ ಈ ಸಂಜೆ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

ಯುವಕನಿಗೆ ಟ್ರೆಕಿಂಗ್ ತೆರಳುವ ಹವ್ಯಾಸವಿದ್ದು ತನ್ನ ಮನೆಯಲ್ಲಿ ಕೇರಳಕ್ಕೆ ಟ್ರೆಕ್ಕಿಂಗ್ ತೆರಳುವೆನೆಂದು ತಿಳಿಸಿದ್ದರು. ಇವರ ತಂದೆ ಮೈಸೂರಿನ ಸ್ಟೆರ್ಲಿಂಗ್ ಟಾಕೀಸಿನ ಬಳಿ ಜ್ಯೂಸ್ ಅಂಗಡಿ ಹೊಂದಿದ್ದು ಅವರಿಗೆ ಅಭಿಷೇಕ್ ಏಕೈಕ ಪುತ್ರ. ಯುವಕನ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಮೃತದೇಹವನ್ನು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗಾಗಿ ಇರಿಸಲಾಗಿದೆ. ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 1
Sad Sad 4
Wow Wow 0