State News

ಮೈಸೂರು: ರೈಲಿಗೆ ಸಿಲುಕಿ ನಿವೃತ್ತ ಎಎಸ್‌ಐ ಆತ್ಮಹತ್ಯೆ

admincoorgdaily

ಲವಕುಶ

ಮೈಸೂರು, ಜ.4: ನಗರದ ಕುಕ್ಕರಹಳ್ಳಿ ಬಳಿಯ ರೈಲ್ವೆ ಗೇಟ್ ಬಳಿ ಭಾನುವಾರ ಸಂಜೆ ರೈಲಿಗೆ ಸಿಲುಕಿ ನಿವೃತ್ತ ಎಎಸ್‌ಐ ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬೋಗಾದಿ ನಿವಾಸಿ ಲವಕುಶ (60) ಮೃತರು.

ಕೆ.ಆರ್. ಪೊಲೀಸ್ ಠಾಣೆಯಲ್ಲಿ ಸಹಾಯಕ ಉಪನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದ ಲವಕುಶ ಅವರು ಮೂರು ತಿಂಗಳ ಹಿಂದಷ್ಟೇ ನಿವೃತ್ತರಾಗಿದ್ದರು.

 ಭಾನುವಾರ ಬೆಳಗ್ಗೆ ಮನೆಯಿಂದ ಹೊರಟ ಅವರು ಕುಕ್ಕರಹಳ್ಳಿ ಪ್ರದೇಶಕ್ಕೆ ತೆರಳಿದ್ದು, ಅಲ್ಲಿ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರ ಪತ್ನಿ ನೀಡಿದ ದೂರಿನ ಮೇರೆಗೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.