Kodagu

ನಾಪೋಕ್ಲು: ಎಕ್ಸೆಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಇಂಟರಾಕ್ಟ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

admincoorgdaily

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು: ಅಂತರಾಷ್ಟ್ರೀಯ ರೋಟರಿ ಸಂಸ್ಥೆ ಉತ್ತಮ ನಾಯಕರನ್ನು ಬೆಳೆಸುವ ಉದ್ದೇಶದಿಂದ ಶಾಲಾ ಮಟ್ಟದಲ್ಲಿ ಇಂಟರಾಕ್ಟ್ ಕ್ಲಬ್ ಗಳನ್ನು ತೆರೆಯುತ್ತಿದೆ ಎಂದು ರೋಟರಿ ಜಿಲ್ಲಾ ಕಾರ್ಯದರ್ಶಿ ರತನ್ ತಮ್ಮಯ್ಯ ಹೇಳಿದರು.

ಇಲ್ಲಿನ ಎಕ್ಸೆಲ್ ಸ್ಕೂಲ್ ಆಫ್ ಎಜುಕೇಶನ್ ನಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆರಂಭಿಸಲಾದ ಇಂಟರಾಕ್ಟ್ ಕ್ಲಬ್ ನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿ ಅವರು ಮಾತನಾಡಿದರು.ವಿಶ್ವದಲ್ಲಿ ರೋಟರಿ ಸಂಸ್ಥೆ ಹತ್ತು ಹಲವು ಸೇವಾ ಕಾರ್ಯಗಳನ್ನು ನಿರ್ವಹಿಸುತ್ತಿದೆ ಎಂದರು. ರೋಟರಿ ಮಿಸ್ಟಿ ಹಿಲ್ಸ್ ಸ್ಥಾಪಕ ಅಧ್ಯಕ್ಷ ಬಿ.ಜಿ ಅನಂತಶಯನ ಮಾತನಾಡಿ ಇಂಟರಾಕ್ಟ್ ಕ್ಲಬ್ ಸದಸ್ಯರಾಗುವ ಮೂಲಕ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವ, ಗುರುತಿಸಿಕೊಳ್ಳುವ ಅವಕಾಶ ಇದೆ ಎಂದರು.

ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ ನೂತನ ತಂಡಕ್ಕೆ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು. ಶಾಲಾ ಸ್ಥಾಪಕ ಅಧ್ಯಕ್ಷ ಕುಟ್ಟಂಜೆಟ್ಟೀರ ಮಾದಪ್ಪ,ಶಾಲಾ ಮುಖ್ಯಶಿಕ್ಷಕ ಚೋಕಿರ ತಮ್ಮಯ್ಯ, ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಬಿ.ಕೆ ಕಾರ್ಯಪ್ಪ ,ಪದಾಧಿಕಾರಿಗಳಾದ ಮೋಹನ್ ಪ್ರಭು,ಪೂವಯ್ಯ ,ಶಂಕರ್ ಪೂಜಾರಿ,ಕುಲ್ಲೇಟಿರ ಅಜಿತ್ ನಾಣಯ್ಯ,ವಿದ್ಯಾ ಸುರೇಶ್ ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು. ಇಂಟರಾಕ್ಟ್ ಕ್ಲಬ್ ನ ಅಧ್ಯಕ್ಷೆಯಾಗಿ ದುಂಧುಬಿ, ಕಾರ್ಯದರ್ಶಿಯಾಗಿ ದರ್ಶ ದೇಚಮ್ಮ, ಉಪಾಧ್ಯಕ್ಷರಾಗಿ ಅಲ್ಫಾರಾಜ್,ಖಜಾಂಚಿಯಾಗಿ ನಿಶಾಂತ್ ಅಧಿಕಾರ ಸ್ವೀಕರಿಸಿದರು.