Kodagu

ನಾಪೋಕ್ಲು: ಹಳೇತಾಲೂಕು ಬದ್ರಿಯಾ ಜುಮಾ ಮಸೀದಿಯ ಸಿರಾಜುಲ್ ಇಸ್ಲಾಂ ಮದರಸದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ

admincoorgdaily

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು :ನಾಪೋಕ್ಲು ಬಳಿಯ ಹಳೇ ತಾಲೂಕುವಿನ ಬದ್ರಿಯಾ ಜುಮಾ ಮಸೀದಿಯ ಸಿರಾಜುಲ್ ಇಸ್ಲಾಂ ಮದರಸದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಮಸೀದಿಯ ಆವರಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಬದ್ರಿಯಾ ಮಸೀದಿಯ ಅಧ್ಯಕ್ಷ ಟಿ. ಎ. ಮಹಮ್ಮದ್ ಅವರು ಧ್ವಜಾರೋಹಣ ನೆರವೇರಿಸಿದರು.

ಮಸೀದಿಯ ಖತೀಬರಾದ ಖಾಲಿದ್ ಹಿಮಮಿಯವರು ಪ್ರಾರ್ಥನೆ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ದಿನದ ಮಹತ್ವದ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಬದ್ರಿಯಾ ಮಸೀದಿಯ ಸಿರಾಜುಲ್ ಇಸ್ಲಾಂ ಮದರಸ ವಿದ್ಯಾರ್ಥಿಗಳಿಂದ ಭಾಷಣ, ದೇಶಭಕ್ತಿ ಗೀತೆ ಸೇರಿದಂತೆ ವಿವಿಧ ಕಾರ್ಯಕ್ರಮ ನಡೆಯಿತು. ಬಳಿಕ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭ ಮಸೀದಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್,ಸಮಿತಿ ಸದಸ್ಯರಾದ ಅಝೀಝ್ ಬಿ. ಎಂ.ಗಫೂರ್ ಬಿ.ಕೆ., ಮಹಮ್ಮದ್ ಅಲಿ ಬಿ.ಕೆ, ಎಂ.ಪಿ. ಹಸೈನಾರ್,ಎಂ. ಎಸ್. ಇಬ್ರಾಹಿಂ,ಎ.ಎಂ.ಮೊಯ್ದು,ಅಧ್ಯಾಪಕರಾದ ಫೈಸಲ್ ಮುಸ್ಲಿಯರ್, ಮಹಮ್ಮದ್ ಮುಸ್ಲಿಯಾರ್, ಸೇರಿದಂತೆ ಜಮಾಅತ್ ಸದಸ್ಯರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.