ನಾಪೋಕ್ಲು: ಬೈಕ್ ಮತ್ತು ಕಾರಿನ ನಡುವೆ ಅಪಘಾತ,ಬೈಕ್ ಸವಾರ ಸ್ಥಳದಲ್ಲೇ ಸಾವು
ಮಡಿಕೇರಿ, ಜೂ. 9: ಬೈಕ್‌ಗೆ ಕಾರೊಂದು ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಸಮೀಪದ ಚೋನಕೆರೆ ಎಂಬಲ್ಲಿ ಮಂಗಳವಾರ ನಡೆದಿದೆ.
ನೆಲಜಿ ಕಡೆಯಿಂದ ನಾಪೋಕ್ಲುವಿನತ್ತ ತೆರಳುತ್ತಿದ್ದ ಚೋನಕೆರೆ ನಿವಾಸಿ ಚೀಯಕಪೂವಂಡ ಬೋಪಣ್ಣ (ಬೋಪಣಿ-77) ಎಂಬವರು ಚಾಲನೆ ಮಾಡುತ್ತಿದ್ದ ಬೈಕ್ (ಕೆಎ-12-ಡಬ್ಲ್ಯೂ-6593) ಗೆ ಎಮ್ಮೆಮಾಡುವಿನಿಂದ ನಾಪೋಕ್ಲುವಿನತ್ತ ತೆರಳುತ್ತಿದ್ದ ಆಕ್ಟೋ ಕಾರು (ಕೆ.ಎ. 03 ಎಂ.ಎಚ್.- 6442) ಹಿಂಬದಿಯಿಂದ ಡಿಕ್ಕಿಯಾಗಿದ್ದು, ಬೈಕಿನಿಂದ ಬಿದ್ದ ಸವಾರ ಬೋಪಣ್ಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾರು ಚಾಲಕ ನೌಷಾದ್ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದು, ಪೊಲೀಸರು ಬಲೆ ಬೀಸಿದ್ದಾರೆ. ಮೃತರು. ಪತ್ನಿ, ಪುತ್ರನನ್ನು ಅಗಲಿದ್ದಾರೆ.
What's Your Reaction?
Like
0
Dislike
1
Love
2
Funny
0
Angry
0
Sad
7
Wow
0
