Kodagu

ನಾಪೋಕ್ಲು:ಬಿಲ್ಲವ ಸಮಾಜ ನಾಪೋಕ್ಲು ವತಿಯಿಂದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮ ಆಚರಣೆ

admincoorgdaily

ನಾಪೋಕ್ಲು:ಬಿಲ್ಲವ ಸಮಾಜ ನಾಪೋಕ್ಲು ವತಿಯಿಂದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮ ಆಚರಣೆ

ಮಡಿಕೇರಿ:ಬಿಲ್ಲವ ಸಮಾಜ ನಾಪೋಕ್ಲುವಿನ ಕಛೇರಿಯಲ್ಲಿ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮವನ್ನು ಸಂಘದ ನಿವೃತ ಯೋಧರನ್ನು ಸನ್ಮಾನಿಸಿ ಗೌರವಿಸುವ ಮೂಲಕ ಆಚರಿಸಲಾಯಿತು.

ಬಿಲ್ಲವ ಸಂಘದ ನಿವೃತ್ತ ಯೋಧರಾದ ಕೊರಗಪ್ಪ ಪೂಜಾರಿ, ವಿಠಲ ಬಿ.ಬಿ. ಧನಂಜಯ ಬಿ.ಜಿ, ಅರುಣ ಬಿ.ಬಿ, ನವೀನ್ ರವರು ಗೌರವ ಸ್ವೀಕರಿಸಿ ಕಾರ್ಗಿಲ್ ಯುದ್ದದ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದ ಕ್ಷಣಗಳು, ಕ್ಯಾಪ್ಟನ್ ವಿಕ್ರಂ ಬಾತ್ರಾ ಅವರಂತಹ ಅನೇಕ ವೀರ ಯೋಧರ ಸಾಹಸ, ಸೇನೆಯಲ್ಲಿ ಕಳೆದ ಕ್ಷಣಗಳನ್ನು ಸಭೆಯಲ್ಲಿ ಹಂಚಿಕೊಂಡರು.

 ಅತಿಥಿಯಾಗಿ ಆಗಮಿಸಿದ್ದ ಸಂಘದ ಸದಸ್ಯರಾದಬಿ.ಕೆ ಮೋಹನ್ ರವರು, ಮಾತನಾಡಿ ಕಾರ್ಗಿಲ್ ಯುದ್ದದ ನಂತರ ಕಾರ್ಗಿಲ್ ಆಪರೇಷನ್ ನಲ್ಲಿ ಮಡಿದ ಸಮಾಜ ಬಾಂಧವರಾದ ಬಿ.ಎಂ ದೇವಪ್ಪ ರವರ ಬಲಿದಾನವನ್ನು ಸ್ಮರಿಸಿದರು.

 ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ ಯೋಧರನ್ನು ಸನ್ಮಾನಿಸಿ ಮಾತನಾಡಿದ ಸಂಘದ ಅಧ್ಯಕ್ಷರು ಹಾಗೂ ಕಾರ್ಗಿಲ್ ಆಪರೇಷನ್ ಸಮಯದಲ್ಲಿ ಹುತಾತ್ಮರಾದ ದೇವಪ್ಪ ಬಿ.ಎಂ ರವರ ಸಹೋದರ ರಾದ ಬಿ.ಎಂ ಪ್ರತೀಪ್ ರವರು, ಸಹೋದರ ಬಿ.ಎಂ ದೇವಪ್ಪನವರು ಸೇನೆಯಲ್ಲಿ ತೋರಿದ ಧೈರ್ಯ, ಸಾಹಸವನ್ನು ನೇನೆಯುತ್ತ ಸಹೋದರ ಕಳುಹಿಸಿದ ಅಂಚೆ ಪತ್ರಗಳನ್ನು ನೆನೆಯುತ್ತ ಭಾವುಕರಾಗಿ ಮುಂದಿನ ದಿನಗಳಲ್ಲಿ ಸೈನ್ಯದಲ್ಲಿದ ಪ್ರತಿಯೊಬ್ಬರನ್ನೂ ಗೌರವಿಸುವ ಕಾರ್ಯ ಸಂಘದಿಂದ ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದರು.

 ಕುಮಾರಿ. ಪ್ರಜ್ಞಾ, ಕು. ಹರ್ಷ, ಕು. ಡಿಸಾಂತ್, ಕು. ಯಶು ರವರು ಕಾರ್ಗಿಲ್ ವಿಜಯದ ಬಗ್ಗೆ ಭಾಷಣ ಮಾಡಿ, ದೇಶ ಭಕ್ತಿ ಗೀತೆ ಹಾಡಿದರು. ಅಂತಿಮವಾಗಿ ಸೇನೆಯಲ್ಲಿ ಮಡಿದ ನಾಪೋಕ್ಲು ಗ್ರಾಮದ ದೇವಪ್ಪ ಬಿ.ಎಂ ರವರಿಗೆ ಮೌನಾಚರಣೆ ಮಾಡುವ ಮೂಲಕ ಶ್ರಂದ್ದಾಂಜಲಿ ಸಲ್ಲಿಸಲಾಯಿತು. ಕಾರ್ಯಕ್ರ‌ಮದಲ್ಲಿ ಸಂಘದ ಆಡಳಿತ ಮಂಡಳಿ, ಸಲಹಾ ಮಂಡಳಿ ಸಂಘದ ಹಿರಿಯ ಮತ್ತು ಸಂಘದ ಸದಸ್ಯರು ಭಾಗವಹಿಸಿದ್ದರು.