ನಾಪೋಕ್ಲು: ರಸ್ತೆಗೆ ಅಡ್ಡಬಂದ ನಾಯಿ, ಚಾಲಕನ ನಿಯಂತ್ರಣ ತಪ್ಪಿ ತೋಡಿಗೆ ಪಲ್ಟಿಯಾದ ಕಾರು

Jan 5, 2026 - 22:10
 0  1.1k
ನಾಪೋಕ್ಲು: ರಸ್ತೆಗೆ ಅಡ್ಡಬಂದ ನಾಯಿ, ಚಾಲಕನ ನಿಯಂತ್ರಣ ತಪ್ಪಿ ತೋಡಿಗೆ ಪಲ್ಟಿಯಾದ ಕಾರು

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು : ರಸ್ತೆಗೆ ಅಡ್ಡ ಬಂದ ನಾಯಿಯನ್ನು ನಿಯಂತ್ರಿಸುವ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ತೋಡಿನೋಳಗೆ ಉರುಳಿಬಿದ್ದ ಘಟನೆ ನಾಪೋಕ್ಲು ಮೂರ್ನಾಡು ಮುಖ್ಯ ರಸ್ತೆಯ ಹೊದವಾಡ ಗ್ರಾಮದ ಬೊಳಿಬಾಣೆ ಎಂಬಲ್ಲಿ ಭಾನುವಾರ ಮಧ್ಯರಾತ್ರಿ ನಡೆದಿದೆ.

ನಾಪೋಕ್ಲು ಕಡೆಯಿಂದ ಮೂರ್ನಾಡು ಕಡೆಗೆ ಇಕೋಸ್ಪೋರ್ಟ್ಸ್ ಕಾರಿನಲ್ಲಿ ಮೂರ್ನಾಡು ನಿವಾಸಿ ಯೊಬ್ಬರು ಚಲಾಯಿಸುತ್ತಿದ್ದ ಸಂದರ್ಭ ನಾಪೋಕ್ಲು ಮೂರ್ನಾಡು ಮುಖ್ಯ ರಸ್ತೆಯ ಹೊದವಾಡ ಗ್ರಾಮದ ಬೊಳಿಬಾಣೆ ಬಳಿಯ ರಸ್ತೆ ತಿರುವಿನಲ್ಲಿ ಧೀಡಿರನೆ ಕಾರಿಗೆ ನಾಯಿಯೊಂದು ಅಡ್ಡಬಂದಿದೆ. ನಾಯಿಯನ್ನು ನಿಯಂತ್ರಿಸುವ ಸಂದರ್ಭ ನಿಯಂತ್ರಣ ಕಳೆದುಕೊಂಡ ಕಾರು ಕಾವೇರಿ ನದಿಗೆ ಹೊಂದಿಕೊಂಡಿರುವ ರಸ್ತೆಬದಿಯ ತೋಡಿನೊಳಗೆ ಉರುಳಿ ಬಿದ್ದಿದೆ. ಅವಘಡದಿಂದ ಕಾರು ಸಂಪೂರ್ಣ ಜಖಂಗೊಂಡಿದ್ದು. ಮೂರ್ನಾಡು ನಿವಾಸಿ ಕಾರಿನ ಚಾಲಕನಿಗೆ ಗಾಯಗಳಾಗಿದ್ದು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದ್ದು ಅದೃಷ್ಟ ವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ತೋಡಿನೊಳಗೆ ಉರುಳಿ ಬಿದ್ದ ಕಾರನ್ನು ಸೋಮವಾರ ಕ್ರೈನ್ ಯಂತ್ರದ ಮೂಲಕ ಮೇಲೆತ್ತಿ ತೆರವು ಗೊಳಿಸಲಾಯಿತು.

 ಸ್ಥಳಕ್ಕೆ ನಾಪೋಕ್ಲು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 1
Angry Angry 0
Sad Sad 3
Wow Wow 1