ನಾಪೋಕ್ಲು; ಡ್ರಗ್ ಪೆಡ್ಲರ್ ಬಂಧನ,ಬಳ್ಳಾರಿ ಕಾರಾಗೃಹಕ್ಕೆ ಶಿಫ್ಟ್

ನಾಪೋಕ್ಲು;  ಡ್ರಗ್ ಪೆಡ್ಲರ್ ಬಂಧನ,ಬಳ್ಳಾರಿ ಕಾರಾಗೃಹಕ್ಕೆ ಶಿಫ್ಟ್

ನಾಪೋಕ್ಲು ;ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯಾದ ಅಶ್ರಫ್ ಕೆ.ಯು, 38 ವರ್ಷ, ಕುಂಜಿಲ ಗ್ರಾಮ, ಕಕ್ಕಬ್ಬೆ ನಾಪೋಕ್ಲು, ಮಡಿಕೇರಿ ತಾಲ್ಲೂಕು ಕೊಡಗು ಜಿಲ್ಲೆ ಈತನು ಡ್ರಗ್ ಪೆಡ್ಲರ್ ಅಸಾಮಿಯಾಗಿದ್ದು, ಈತನ ವಿರುದ್ಧ ಅಕ್ರಮವಾಗಿ ನಿಷೇಧಿತ ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದ ಸಂಬಂಧ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ 2018 ನೇ ಸಾಲಿನಲ್ಲಿ 1-ಪ್ರಕರಣ, 2020ನೇ ಸಾಲಿನಲ್ಲಿ 1-ಪ್ರಕರಣ, 2021 ನೇ ಸಾಲಿನಲ್ಲಿ 1-ಪ್ರಕರಣ, 2023 ನೇ ಸಾಲಿನಲ್ಲಿ 1-ಪ್ರಕರಣ, ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ 2022 ನೇ ಸಾಲಿನಲ್ಲಿ 1-ಪ್ರಕರಣ ಮತ್ತು 2025 ನೇ ಸಾಲಿನಲ್ಲಿ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ 1-ಪ್ರಕರಣ ದಾಖಲಾಗಿದ್ದು, ಒಟ್ಟು 06 ಪ್ರಕರಣಗಳ ಪೈಕಿ 2 ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದು, ಉಳಿದ 4 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುತ್ತದೆ.

ಈತನು ರೂಢಿಗತ ಡ್ರಗ್ ಪೆಡ್ಲರ್ ಆಗಿದ್ದು, ಜಾಮೀನು ಪಡೆದು ಹೊರ ಬಂದ ನಂತರ ಪುನಃ ಅಕ್ರಮವಾಗಿ ನಿಷೇಧಿತ ಮಾದಕ ವಸ್ತುಗಳ ಮಾರಾಟ ಮಾಡುವ ಪ್ರಕರಣದಲ್ಲಿ ತೊಡಗಿಸಿಕೊಳ್ಳುತ್ತಿದ್ದುದರಿಂದ The Prevention of Illicit Traffic in Narcotic Drugs and Psychotropic Substances Act - 1988 ಕಲಂ: 3(1) ರ ಅಡಿಯಲ್ಲಿ ಮಾನ್ಯ ಪೊಲೀಸ್ ಮಹಾನಿರೀಕ್ಷಕರು, ದಕ್ಷಿಣ ವಲಯ, ಮೈಸೂರು ರವರು ಅಶ್ರಫ್ ಕೆ. ಯು ಈತನನ್ನು ಕೇಂದ್ರ ಕಾರಾಗೃಹ, ಬಳ್ಳಾರಿ ಇಲ್ಲಿ ಬಂಧನದಲ್ಲಿಡಲು ದಿನಾಂಕ: 30-04-2026 ರಂದು ಆದೇಶಿಸಲಾಗಿರುತ್ತದೆ.

ಸದರಿ ಮೇಲ್ಕಂಡ ಆದೇಶದನ್ವಯ ಪೊಲೀಸ್ ಉಪನಿರೀಕ್ಷಕರು, ನಾಪೋಕ್ಲು ಪೊಲೀಸ್ ಠಾಣೆ ರವರು ದಿನಾಂಕ: 30-04-2026 ರಂದು ಬಂಧಿಸಿ ಕೇಂದ್ರ ಕಾರಾಗೃಹ, ಬಳ್ಳಾರಿಗೆ ಬಿಡಲಾಗಿರುತ್ತದೆ.