ನಾಪೋಕ್ಲು;ಮಡಿಕೇರಿ ಮುಖ್ಯ ರಸ್ತೆಗೆ ವಾಲಿದ ವಿದ್ಯುತ್ ಕಂಬ: ತಕ್ಷಣ ಸ್ಪಂದಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದ ಸೆಸ್ಕ್ ಸಿಬ್ಬಂದಿಗಳು
admincoorgdaily
ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು :ನಾಪೋಕ್ಲು ಮಡಿಕೇರಿ ಮುಖ್ಯ ರಸ್ಥೆಗೆ ವಿದ್ಯುತ್ ಕಂಬವೊಂದು ವಾಲಿ ನಿಂತ ಪರಿಣಾಮ ಭಾರಿ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾದ ಘಟನೆ ನಡೆದಿದೆ.
ನಾಪೋಕ್ಲು ಪಟ್ಟಣದಿಂದ ಮಡಿಕೇರಿ ತೆರಳುವ ಮುಖ್ಯ ರಸ್ತೆಯ ಚೆರಿಯಪರಂಬು ಜಂಕ್ಷನ್ ಬಳಿಯ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬ ಹಾಗೂ ತಂತಿಗಳು ದಿಢೀರನೆ ಮುಖ್ಯ ರಸ್ತೆಗೆ ವಾಲಿ ನಿಂತಿದೆ. ಇದರಿಂದ ಕೆಲಕಾಲ ಭಾರಿ ವಾಹನಗಳ ಸಂಚಾರಕ್ಕೆ ತೊಡಕುಂಟಾಯಿತು. ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕೆ ಧಾವಿಸಿದ ನಾಪೋಕ್ಲು ಸೆಸ್ಕ್ ಇಲಾಖೆಯ ಅಧಿಕಾರಿ ಹರೀಶ್ ಹಾಗೂ ಸಿಬ್ಬಂದಿಗಳು ರಸ್ತೆಗೆ ವಾಲಿದ್ದ ವಿದ್ಯುತ್ ಕಂಬವನ್ನು ದುರಸ್ತಿ ಪಡಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು.