ನಾಪೋಕ್ಲು; ಮದೀನಾ ಮಸೀದಿಯಲ್ಲಿ ಸಂಭ್ರಮದ ಈದುಲ್ ಫಿತರ್ ಆಚರಣೆ
admincoorgdaily

ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು : ಮುಸಲ್ಮಾನ ಬಾಂಧವರು ಒಂದು ತಿಂಗಳ ಕಠಿಣ ವೃತಾಚರಣೆಯ ಬಳಿಕ ಆಚರಿಸಲ್ಪಡುವ ಪವಿತ್ರ ಈದುಲ್ ಫಿತರ್ ರಂಝಾನ್ ಹಬ್ಬವನ್ನು ನಾಪೋಕ್ಲುವಿನ ಮದೀನ ಮಸೀದಿಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಮಸೀದಿಯ ಧರ್ಮಗುರುಗಳಾದ ಶೇಕ್ ಮೌಲಾನ ಹೈದರಲಿ ಅವರ ನೇತೃತ್ವದಲ್ಲಿ ಸಾಮೂಹಿಕ ಈದ್ ನಮಾಜ್ ನೆರವೇರಿಸಲಾಯಿತು.
ಸಮಾಜದಲ್ಲಿ ಎಲ್ಲಾ ಧರ್ಮದವರು ಪರಸ್ಪರ ಪ್ರೀತಿ ವಿಶ್ವಾಸ,ಸಹಬಾಳ್ವೆ ಸೌಹಾರ್ದತೆಯಿಂದ ಜೀವನ ನಡೆಸಬೇಕೆಂದು ಧರ್ಮಗುರುಗಳಾದ ಮೌಲಾನ ಹೈದರಲಿ ಅವರು ಈದ್ ಸಂದೇಶ ಸಾರಿದರು.ಬಳಿಕ ನಾಡಿನ ಸುಭೀಕ್ಷಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭ ಮಸೀದಿಯ ಅಧ್ಯಕ್ಷರಾದ ವಾಸಿಮ್ ಕ್ಲಾಸಿಕ್,ಕಾರ್ಯದರ್ಶಿ ನಝೀರ್ ಹಾಜಿ, ವಕೀಲಾರದ ರಿಯಾಝ್, ಅಬ್ದುಲ್ ಗಫೂರ್ ಹಾಜಿ, ಜಿಲ್ಲಾ ವಖ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಝಹೀರ್ ಖಾನ್,ರೋಷನ್, ಯಾಸೀನ್ ಸಾಹೇಬ್,ಲಿಯಾಕತ್ ಅಲಿ ಹಾಜಿ, ಅಬ್ದುಲ್ ಜಬ್ಬಾರ್ ಸಾಹೇಬ್, ಅಝೀಝ್ ಮಾಸ್ಟರ್, ಝಮೀರ್ ಖಾನ್ ಸೇರಿದಂತೆ ಮತ್ತಿತರ ಪ್ರಮುಖರು ಹಾಜರಿದ್ದರು.