ನಾಪೋಕ್ಲು:ಟ್ರಾಫಿಕ್ ರೂಲ್ಸ್ ಬೇಕ್ರ್ ಮಾಡಿದವರಿಗೆ ಬಿತ್ತು ದಂಡ

Dec 22, 2025 - 08:52
 0  1.1k
ನಾಪೋಕ್ಲು:ಟ್ರಾಫಿಕ್ ರೂಲ್ಸ್ ಬೇಕ್ರ್ ಮಾಡಿದವರಿಗೆ ಬಿತ್ತು ದಂಡ

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು : ನಾಪೋಕ್ಲು ವಿನಲ್ಲಿ ದಾಖಲಾತಿಗಳಿಲ್ಲದೆ ರಸ್ತೆ ಸುರಕ್ಷತಾ ನಿಯಮ ಉಲ್ಲಂಘಿಸಿ ವಾಹನ ಚಲಾಯಿಸುತ್ತಿದ್ದ ಚಾಲಕರಿಗೆ ನಾಪೋಕ್ಲು ಪೊಲೀಸರು ದಂಡ ವಿಧಿಸಿ ಬಿಸಿ ಮುಟ್ಟಿಸಿದ್ದಾರೆ.

ನಾಪೋಕ್ಲು ಠಾಣಾಧಿಕಾರಿ ರಾಘವೇಂದ್ರ ಅವರ ನೇತೃತ್ವದಲ್ಲಿ ನಾಪೋಕ್ಲುಪಟ್ಟಣದ ಹೊರವಲಯದ ನೆಲಜಿ ಭಾಗಮಂಡಲ ಮುಖ್ಯರಸ್ತೆಯಲ್ಲಿ ವಾಹನಗಳ ಪರಿಶೀಲನೆ ನಡೆಸಿದ ಪೊಲೀಸರು ದಾಖಲಾತಿಗಳಿಲ್ಲದೆ ರಸ್ತೆ ಸುರಕ್ಷತಾ ನಿಯಮ ಉಲ್ಲಂಘಿಸಿ ವಾಹನ ಚಲಾಯಿಸುತ್ತಿದ್ದ ಚಾಲಕರಿಗೆ ಹಾಗೂ ಗೂಡ್ಸು ವಾಹನಗಳಲ್ಲಿ ನಿಯಮ ಉಲ್ಲಂಘಿಸಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಚಾಲಕರಿಗೆ ಹಾಗೂ ಇನ್ನಿತರ ವಾಹನ ಸವಾರರಿಗೆ ದಾಖಲಾತಿ ಪರಿಶೀಲಿಸಿ ದಂಡ ವಿಧಿಸಿ ಬಿಸಿ ಮುಟ್ಟಿಸಿದರು.ಇದೇ ವೇಳೆ ಡ್ರಿಂಕ್ ಅಂಡ್ ಡ್ರೈವ್ ಪರಿಶೀಲನೆ ನಡೆಸಿ ಸಿಕ್ಕಿಬಿದ್ದ ಚಾಲಕರಿಗೆ ದಂಡ ವಿಧಿಸಿ ವಾಹನವನ್ನು ವಶಕ್ಕೆ ಪಡೆದುಕೊಂಡರು. ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಸವಾರರಿಗೆ ಹೆಲ್ಮೆಟ್ ಧರಿಸಿದೆ ವಾಹನ ಚಲಾಯಿಸುವಾಗ ಅಪಘಾತವಾದರೆ ಉಂಟಾಗುವ ಪ್ರಾಣ ಹಾನಿಯ ಕುರಿತು ಜಾಗೃತಿ ಮೂಡಿಸಿದ ಠಾಣಾಧಿಕಾರಿ ರಾಘವೇಂದ್ರ ಮುಂದೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಚಾಲಕರಿಗೆ ಸೂಚಿಸಿ ದಂಡ ವಿಧಿಸಿ ಎಚ್ಚರಿಕೆ ನೀಡಿದರು.

 ಈ ಸಂದರ್ಭ ಸಿಬ್ಬಂದಿಗಳಾದ ವಿಜಯಕುಮಾರ್, ನಾಗರಾಜ್,ಆನಂದ,ರಂಜಿತ್,ವೆಂಕಟೇಶ್,ಚಾಲಕ ಸಂತೋಷ್ ಪಾಲ್ಗೊಂಡಿದ್ದರು.

What's Your Reaction?

Like Like 0
Dislike Dislike 1
Love Love 1
Funny Funny 0
Angry Angry 0
Sad Sad 0
Wow Wow 1