ನಾಪೋಕ್ಲು: ನೂತನ ರಸ್ತೆ ಉದ್ಘಾಟಿಸಿದ ಶಾಸಕ ಎಎಸ್ ಪೊನ್ನಣ್ಣ
ನಾಪೋಕ್ಲು:ವಿರಾಜಪೇಟೆ ವಿಧಾನಸಭಾ ಕ್ಷೇತ್ರದ, ಮಡಿಕೇರಿ ತಾಲೂಕಿನ ನಾಪೋಕ್ಲು ಗ್ರಾಮದಲ್ಲಿ ಕೊಡವ ಸಮಾಜ ಬಳಿ ಹಾದು ಹೋಗುವ ರಸ್ತೆಯನ್ನು ಶಾಸಕರ ನೀಡಿದ 20ಲಕ್ಷ ಅನುದಾನದಲ್ಲಿ ಅಭಿವೃದ್ಧಿ ಪಡಿಸಲಾಗಿತ್ತು. ಇಂದು ಇಲ್ಲಿಗೆ ಆಗಮಿಸಿದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಪೂರ್ಣಗೊಂಡ ಕಾಂಕ್ರೀಟ್ ರಸ್ತೆಯನ್ನು ಲೋಕಾರ್ಪಣೆ ಮಾಡಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಡಿಸಿಸಿ ಸದಸ್ಯರು ಅಬುದುಲ್ ರೆಹಮಾನ್, ಶೇರಿ ಗಿರೀಶ್, ನಾಪೋಕ್ಲು ಬ್ಲಾಕ್ ಅಧ್ಯಕ್ಷರು ಇಸ್ಮಾಯಿಲ್, ಪಂಚಾಯಿತಿ ಅಧ್ಯಕ್ಷರು ವನಜಾಕ್ಷಿ, ಸದಸ್ಯರು ಅರುಣ್ ಬೇಬ, ಹೇಮಾವತಿ, ವಲಯ ಅಧ್ಯಕ್ಷರು ಕುಶಾಲಪ್ಪ, ಜಿಲ್ಲಾ ಅಲ್ಪಸಂಖ್ಯಾತರ ಘಟದ ಅಧ್ಯಕ್ಷರು ಹನೀಫ್, ತಾಲೂಕು ಅಲ್ಪಸಂಖ್ಯಾತರ ಘಟದ ಅಧ್ಯಕ್ಷರು ರಫೀಕ್, ಮುಂಡಾಂಡ ನಾಣಯ್ಯ, ಕಕ್ಕಬೆ ಪಂಚಾಯಿತಿ ಸದಸ್ಯರು ಸಂಪನ್ ಅಯ್ಯಪ್ಪ, ಸದಸ್ಯರು ರಜಾಕ್, ವಾಸಿಮ್, ಗ್ಯಾರಂಟಿ ಅನುಷ್ಠಾನ ಸದಸ್ಯರು ಸಿರಾಜ್, ನಾಪೋಕ್ಲು ಯುವ ಕಾಂಗ್ರೆಸ್ ಅಧ್ಯಕ್ಷರು ಹಂಸ ಕೊಡಿ, ಪಕ್ಷದ ಪ್ರಮುಖರು, ಸ್ಥಳೀಯರು, ಕಾರ್ಯಕರ್ತರು ಉಪಸ್ಥಿತರಿದ್ದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
