ನಾಪೋಕ್ಲು: ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಶಾಸಕ ಎಎಸ್ ಪೊನ್ನಣ್ಣ ಭೇಟಿ

Aug 9, 2026 - 17:40
 0  110
ನಾಪೋಕ್ಲು: ಶ್ರೀ ವೆಂಕಟರಮಣ ದೇವಸ್ಥಾನಕ್ಕೆ  ಶಾಸಕ ಎಎಸ್ ಪೊನ್ನಣ್ಣ ಭೇಟಿ

ನಾಪೋಕ್ಲು: ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ವಿರಾಜಪೇಟೆ ಶಾಸಕರಾದ ಎಎಸ್ ಪೊನ್ನಣ್ಣ ಭೇಟಿ ನೀಡಿ ಪ್ರಾರ್ಥಿಸಿ ದೇವಸ್ಥಾನವನ್ನು ವೀಕ್ಷಿಸಿದರು. ಸ್ಥಳೀಯ ಭಕ್ತಾದಿಗಳ ಕೋರಿಕೆ ಮೇರೆಗೆ ಶ್ರೀದೇವರ ಸನ್ನಿಧಿಗೆ ತೆರಳಿದ ಮಾನ್ಯ ಶಾಸಕರು, ದೇವಸ್ಥಾನ ಸಮಿತಿಯವರ ಅವಾಲುಗಳನ್ನು ಆಲಿಸಿದರು.

 ನವೀಕರಣಗೊಳ್ಳುತ್ತಿರುವ ದೇವಸ್ಥಾನದ ಅಭಿವೃದ್ಧಿಗೆ ಶಾಸಕರಿಗೆ ಮನವಿ ಸಲ್ಲಿಸಿದಾಗ, ಎಲ್ಲವನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಈ ಸಂದರ್ಭದಲ್ಲಿ ಮಾನ್ಯ ಶಾಸಕರು ತಿಳಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನ ಅಧ್ಯಕ್ಷರು ಆಡಳಿತ ಮಂಡಳಿ ಸದಸ್ಯರು, ವಲಯ ಅಧ್ಯಕ್ಷರು ಕುಶಾಲಪ್ಪ, ಕೆ ಡಿ ಪಿ ಸದಸ್ಯರು ಬಾಚಮಾಂಡ ಲವ ಚಿಣ್ಣಪ್ಪ, ಕಕ್ಕಬೆ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ ವಲಯ ಅಧ್ಯಕ್ಷರು ಕಲಿಯಂಡ ಸಂಪನ್ ಅಯ್ಯಪ್ಪ, ಡಿಸಿಸಿ ಉಪಾಧ್ಯಕ್ಷರು ಅಬ್ದುಲ್ ರೆಹಮಾನ್, ಬ್ಲಾಕ್ ಅಧ್ಯಕ್ಷರು ಸೌಕತ್ ಆಲಿ, ಪಂಚಾಯತ್ ಅಧ್ಯಕ್ಷರು ವನಜಾಕ್ಷಿ, ಸದಸ್ಯರು ಅರುಣ್ ಬೇಬ, ಪಕ್ಷದ ಮುಖಂಡರು ಹಾಗೂ ಪ್ರಮುಖ ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0