ನಾಪೋಕ್ಲು ಪೊಮ್ಮಕ್ಕಡ ಪರಿಷತ್ ವತಿಯಿಂದ ಕಕ್ಕಡ ತೀನಿ ನಮ್ಮೆ
ನಾಪೋಕ್ಲು: ಸಮಾಜದ ಮಕ್ಕಳಿಗೆ ಭಾಷೆ ಹಾಗೂ ಪಾರಂಪರಿಕ ಸಂಪ್ರದಾಯಗಳನ್ನು ತಿಳಿಸುವ ಕೆಲಸ ಆಗಬೇಕಿದೆ ಎಂದು ಲೇಖಕಿ ಅಖಿಲ ಕೊಡವ ಸಮಾಜದ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಐಚoಡ ರಶ್ಮಿ ಪೂವಮ್ಮ ಹೇಳಿದರು.
ಇಲ್ಲಿನ ಕೊಡವ ಸಮಾಜದ ಪೊ ಕ್ಕಡ ಪರಿಷತ್ ವತಿಯಿಂದ ಕೊಡವ ಸಮಾಜದ ಹರದಾಸ ಅಪ್ಪ ನೆರವಂಡ ಅಪ್ಪಚ್ಚ ಕವಿ ಸಭಾಂಗಣದಲ್ಲಿ ಪೊಮ್ಮಕ್ಕಡ ಪರಿಷತ್ ನಾಪೋಕ್ಲು ವತಿಯಿಂದ ಆಯೋಜಿಸಲಾಗಿದ್ದ ಕಕ್ಕಡ ತೀನಿ ನಮ್ಮೆ ಸಭಾ ಕಾರ್ಯಕ್ರಮವನ್ನು ದೀಪಾ ಬೆಲಗುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕೊಡವ ಜನಾಂಗ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು.ಆಗಷ್ಟೇ ಜನಾಂಗದ ಅಭಿವೃದ್ಧಿ ಸಾಧ್ಯ. ಇದರ ಜೊತೆಗೆ ಸಂಸ್ಕೃತಿ,ಆಚಾರ,ವಿಚಾರಗಳನ್ನು ಯುವ ಜನಾಂಗ ರೂಡಿಸಿಕೊಳ್ಳಬೇಕು. 1. ತರಗತಿಯಿಂದ ಡಿಗ್ರಿವರೆಗೆ ಕೊಡವ ಪಠ್ಯಪುಸ್ತಕ ಮುದ್ರಣ ಆಗಿದ್ದು ಕೊಡವ ಭಾಷೆಯಲ್ಲಿ ಭೋದಿಸುವ ಶಿಕ್ಷಕರ ಅಗತ್ಯವಿದೆ ಎಂದ ಅವರು ಹತ್ತು ಕೋಟಿ ರೂ. ವೆಚ್ಚದಲ್ಲಿ ಕೊಡವಾ ಅಧ್ಯಯನ ಪೀಠ ಸ್ಥಾಪನೆಯಾಗಿದ್ದು ಅಧ್ಯಯನ ಮಾಡುವವರಿಗೆ ಅವಕಾಶವಿದೆ ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳುವಂತಾಗಬೇಕು ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಅಲ್ಲಾರಂಡ ಬೀನಾ ಬೊಳ್ಳಮ್ಮ ತಿನಿಸುಗಳ ಪ್ರದರ್ಶನವನ್ನು ರಿಬ್ಬನ್ ಕತ್ತರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ ಮೊದಲು ನಾವು ಆತ್ಮವಿಶ್ವಾಸ ಬೆಳೆಸಿಕೊಂಡು ಬಳಿಕ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಬೇಕು . ಮಕ್ಕಳು ಎಷ್ಟೇ ಶಿಕ್ಷಣ ಪಡೆದರು ಅವರಿಗೆ ಕೊಡವ ಪದ್ಧತಿ ಪರಂಪರೆ ಸಂಸ್ಕೃತಿಯನ್ನು ತಿಳುವಳಿಕೆಯನ್ನು ನೀಡಬೇಕು ಎಂದರು. ಅಭಿವ್ಯಕ್ತಿ ಪಡಿಸುವ ಸಾಮರ್ಥ್ಯ ಕೊಡವ ಮಹಿಳೆಯರಲ್ಲಿದೆ ಅಡುಗೆ ಮಾಡುವವರು ಇದರಲ್ಲೂ ಎತ್ತಿದ ಕೈ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಷ್ಟ್ರಪ್ರಶಸ್ತಿ ವಿಜೇತ ಮುಕ್ಕಾಟಿರ ಸೌಮ್ಯ ಮಾತನಾಡಿ ತಮ್ಮ ಅಪಾರ ಅನುಭವದೊಂದಿಗೆ ಅತ್ಯುತ್ತಮ ಉಪಯುಕ್ತ ಮಾಹಿತಿಯನ್ನು ನೀಡಿದರು. ಪರಿಷತ್ತು ಉತ್ತಮ ಕಾರ್ಯ ಕ್ರಮವನ್ನು ರೂಪಿಸುತ್ತಿದೆ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಪರಿಷತ್ ಕಾರ್ಯ ಶ್ಲಾಘನೀಯ ಎಂದರು.
ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ಸಿ. ನಾಣಯ್ಯ ಮಾತನಾಡಿ ಕೊಡವ ಜನಾಂಗದ ಅಭಿವೃದ್ಧಿಗೆ ಮಹಿಳೆಯರ ಪಾತ್ರ ಪ್ರಮುಖವಾದದ್ದು. ಕೊಡವ ಸಮಾಜದ ಬೆಳವಣಿಗೆಯೊಂದಿಗೆ ಕೊಡವ ಪೊಮ್ಮಕ್ಕಳ ಪರಿಷತ್ ಕೂಡ ಅತ್ಯುತ್ತಮ ರೀತಿಯಲ್ಲಿ ಕೈಜೋಡಿಸುತ್ತಿದೆ. ಪರಿಷತ್ತಿನ ಸೇವೆ ಕೊಡವ ಪುರುಷರಿಗೂ ದೊರಕುವಂತಾಗಬೇಕು ಎಂದು ಶುಭ ಹಾರೈಸಿದರು.
ಕೊಡವಡ ಮಾಲ್ ಮಟ ಎಂಬ ವಿಷಯದ ಕುರಿತು ಬಿದ್ದಾಟಂಡ ಮಮತಾ ಚಿಣ್ಣಪ್ಪ ವಿಚಾರ ಮಂಡಿಸಿದರು. ಕೊಡವ ಸಮಾಜ ಮೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಳೆಯಡ ನಿಶಾ ಮೇದಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ. ವಿವಿಧ ತಿನಿಸುಗಳ ಸ್ಪರ್ಧೆ ಹಾಗೂ ಪ್ರದರ್ಶನ ಮತ್ತು ಕ್ರೀಡಾಕೂಟ ಜರುಗಿ.ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಅರೆಯಡ ಸರಸು ಪೆಮ್ಮಯ್ಯ ಪ್ರಾರ್ಥಿಸಿ ನಾಯಕಂಡ ಜೂಬಿ ತಿಮ್ಮಯ್ಯ ಸ್ವಾಗತಿಸಿದರು. ಕಾಂಡಂಡ ಪ್ರತಿಜ ಅಚ್ಚಪ್ಪ. ಮತ್ತು ಕರವಂಡ ಸೀಮ ಗಣಪತಿ ಅತಿಥಿಗಳ ಪರಿಚಯಮಾಡಿ ವಂದನಾ ಚಿನ್ನಪ್ಪ ನಿರೂಪಿಸಿ ಕಲಿಯಂಡ ಗೀತಾ ಗಿರೀಶ್ ವಂದಿಸಿದರು. ಈ ಸಂದರ್ಭ ಕೊಡವ ಸಮಾಜ ಹಾಗೂ ಪರಿಷತ್ತಿನ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
