ನಾಪೋಕ್ಲು:ಡಬಲ್ ರೇಟ್ ಗೆ ಸಿಗರೇಟ್ ಮಾರಾಟ!

ನಾಪೋಕ್ಲು:ಡಬಲ್ ರೇಟ್ ಗೆ ಸಿಗರೇಟ್ ಮಾರಾಟ!
ಸಾಂದರ್ಭಿಕ ಚಿತ್ರ

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು :ಫೆಬ್ರವರಿ 01ರಿಂದ ತಂಬಾಕು ಉತ್ಪನ್ನಗಳ‌ ಮೇಲೆ‌ ತೆರಿಗೆ ಹೆಚ್ಚಳವಾಗು ಸಾಧ್ಯತೆ ಇದೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆ ನಾಪೋಕ್ಲು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಅಂಗಡಿ ಮಳಿಗೆಗಳ ಮಾಲೀಕರು ಸಿಗರೇಟ್ ವ್ಯಾಪಾರದಲ್ಲಿ ಗ್ರಾಹಕರಿಂದ ದುಪ್ಪಟ್ಟುಹಣ ಪಡೆದು ಸುಲಿಗೆ ಮಾಡುವ ಮೂಲಕ ತಮ್ಮ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

 ಪಟ್ಟಣದ ಕೆಲವು ಅಂಗಡಿ ಗಳಲ್ಲಿ 100ರೂ MRP ದರದ ಸಿಗರೇಟ್ 150,170MRP ದರದ ಕಿಂಗ್ ಸಿಗರೇಟ್ 250ರೂ ದುಪ್ಪಟ್ಟು ಹಣ ಪಡೆಯುತ್ತಿದ್ದಾರೆ ಎಂದು ಗ್ರಾಹಕರು ಆರೋಪಿಸಿದ್ದಾರೆ. ಅದರಂತೆ 50-80ರೂ MRP ದರಗಳಿರುವ ಸಿಗರೇಟ್ ಪ್ಯಾಕ್ ಗಳಮೇಲೆ ದುಪ್ಪಟ್ಟು 50ರಿಂದ 100ರೂಗಳಷ್ಟು ದುಪ್ಪಟ್ಟು ಹಣ ಪಡೆದು ಸುಲಿಗೆ ಮಾಡುತ್ತಿದ್ದಾರೆ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಅಂಗಡಿಗಳಲ್ಲಿ ಮಾರಾಟ ಮಾಡುವ ಯಾವುದೇ ವಸ್ತುವವನ್ನು ಅದರ ಮೇಲಿರುವMRP ದರಕ್ಕಿಂತ ಹೆಚ್ಚು ಪಡೆದುಕೊಳ್ಳುವುದು ಕಾನೂನಿನಲ್ಲಿ ಅಪರಾಧವಾಗಿದ್ದರೂ ಕೂಡ ನಾಪೋಕ್ಲುವಿನ ಅಂಗಡಿ ಮಾಲೀಕರು ಸಿಗರೇಟ್ ಪ್ಯಾಕ್ಗಳಲ್ಲಿ ಬಜೆಟ್ ನಂತರ ಬರಲಿರುವ ನೂತನ ದರಕ್ಕಿಂತ ಮೊದಲೇ ಸುಲಿಗೆ ಮಾಡುತ್ತಿರುವುದು ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ.

 ಪಟ್ಟಣದ ಅಂಗಡಿಯವೊಂದಕ್ಕೆ ಗ್ರಾಹಕರೊಬ್ಬರು ತೆರಳಿ ಸಿಗರೇಟ್ ಖರೀದಿಸುವ ವೇಳೆ MRP ದರಕ್ಕಿಂತ ದುಪ್ಪಟ್ಟು ಹಣಕೇಳಿದ ಮಾಲೀಕನಲ್ಲಿ ನೀವು ಯಾಕೆ MRP ದರಕ್ಕಿಂತ ಹೆಚ್ಚು ಪಡೆಯುತ್ತಿದ್ದೀರ ಎಂದು ಪ್ರಶ್ನಿಸಿದಾಗ ನಿಮಗೆ ಬೇಕಾದರೆ ತಗೊಳ್ಳಿ ಇಲ್ಲದಿದ್ದರೆ ತೊಲಗಿ ಎಂದು ಉಡಾಫೆ ಉತ್ತರ ನೀಡಿದ್ದಾರೆ ಎಂದು ಗ್ರಾಹಕ ಅಸಮಾಧಾನ ವ್ಯಕ್ತಪಡಿಸಿದ್ದು ಇದನ್ನು ನಿಯಂತ್ರಿಸುವವರು ಯಾರು ಎಂದು ಪ್ರಶ್ನಿಸಿದ್ದಾರೆ. ಸಿಗರೇಟ್ ಪ್ಯಾಕ್ ನಲ್ಲಿರುವ MRP ದರಕ್ಕಿಂತ ದುಪ್ಪಟ್ಟು ಹಣ ಪಡೆದು ಸುಲಿಗೆ ಮಾಡುತ್ತಿರುವ ಅಂಗಡಿಗಳ ಮಾಲೀಕರ ವಿರುದ್ಧ ಸಂಬಂಧಪಟ್ಟ ಇಲಾಖೆಯವರು ಕೂಡಲೇ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಗ್ರಾಹಕರು ಒತ್ತಾಯಿಸಿದ್ದಾರೆ.