ನಾಪೋಕ್ಲು;ಶಾಲೆಯಿಂದ ಟ್ಯಾಬ್-ಲ್ಯಾಪ್ ಟಾಪ್ ಕಳ್ಳತನ

May 7, 2026 - 11:02
 0  484
ನಾಪೋಕ್ಲು;ಶಾಲೆಯಿಂದ ಟ್ಯಾಬ್-ಲ್ಯಾಪ್ ಟಾಪ್ ಕಳ್ಳತನ

ನಾಪೋಕ್ಲು, ಮೇ 6: ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಿಂದ 6 ಟ್ಯಾಬ್ ಹಾಗೂ ಒಂದು ಲ್ಯಾಪ್ಟಾಪ್ ಕಳವಾದ ಘಟನೆ ನಡೆದಿದೆ. ಶಾಲೆಯ ಅಧ್ಯಾಪಕರ ಕೊಠಡಿ ಹಿಂಬದಿಯಿಂದ ಕಿಟಕಿಯ ಗಾಜು ಒಡೆದು ನುಗ್ಗಿರುವ ಕಳ್ಳರು ಕೃತ್ಯವೆಸಗಿದ್ದಾರೆ. ಶಾಲೆಯ ಮುಖ್ಯ ಶಿಕ್ಷಕಿ ನಳಿನಿ ಅವರು ಬೆಳಿಗ್ಗೆ ಶಾಲೆಗೆ ಆಗಮಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ತಕ್ಷಣ ಅವರು ಇಲ್ಲಿಯ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದ ಬಳಿಕ ಮಡಿಕೇರಿಯಿಂದ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದರು. ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 1
Angry Angry 0
Sad Sad 0
Wow Wow 0