ನಾಪೋಕ್ಲು: ವಿಟಿಸಿ ಮಳಿಗೆಯ ವ್ಯಾಪಾರಿ ಅಬ್ದುಲ್ ರಹ್ಮಾನ್ ನಿಧನ
ನಾಪೋಕ್ಲು: ನಾಪೋಕ್ಲುವಿನಲ್ಲಿ ಹಲವು ವರ್ಷಗಳಿಂದ ವಿಟಿಸಿ ಮಳಿಗೆಯಲ್ಲಿ ವ್ಯಾಪಾರ ನಡೆಸುತ್ತಿದ್ದ ಕೇರಳದ ಕಣ್ಣೂರ್ ಜಿಲ್ಲೆ ಇರಿಕ್ಕೂರ್ ನಿವಾಸಿ ಅಬ್ದುಲ್ ರಹ್ಮಾನ್ (45) ಅವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು.
ತಮ್ಮ ಮಳಿಗೆಯಲ್ಲಿದ್ದ ವೇಳೆ ಅವರಿಗೆ ಹಠಾತ್ ಹೃದಯಾಘಾತ ಸಂಭವಿಸಿದೆ. ತಕ್ಷಣ ಸ್ಥಳೀಯ ಆಸ್ಪತ್ರೆಗೆ ಸಾಗಿಸಿದರೂ ಫಲಕಾರಿಯಾಗದೆ ಕೊನೆಯುಸಿರೆಳೆದರು ಎಂದು ಕುಟುಂಬ ಮೂಲಗಳು ತಿಳಿಸಿವೆ.
"ಅಂದ್ರುಮಾನ್" ಎಂದೇ ಸ್ಥಳೀಯರಿಂದ ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಅಬ್ದುಲ್ ರಹ್ಮಾನ್ ಅವರು ದಶಕಗಳಿಂದ ನಾಪೋಕ್ಲುವಿನಲ್ಲಿ ವ್ಯಾಪಾರ ನಡೆಸಿ ಎಲ್ಲರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದರು. ಮೃತರ ದಫನ ಕಾರ್ಯ ಇಂದು ಸಂಜೆ ಸ್ವಗ್ರಾಮ ಕೇರಳದ ಇರಿಕ್ಕೂರಿನಲ್ಲಿ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮೃತರು ಪತ್ನಿ, ಮಕ್ಕಳು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
What's Your Reaction?
Like
0
Dislike
0
Love
1
Funny
1
Angry
0
Sad
3
Wow
0
