ನಾಪೋಕ್ಲು; ನೀರಿನಲ್ಲಿ ಮುಳುಗಿ ಯುವಕ ಸಾವು

May 10, 2026 - 19:08
 0  1.9k
ನಾಪೋಕ್ಲು; ನೀರಿನಲ್ಲಿ ಮುಳುಗಿ ಯುವಕ ಸಾವು

ಮಡಿಕೇರಿ; ಸ್ನಾನಕ್ಕೆ ತೆರಳಿದ್ದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಇಲ್ಲಿಗೆ ಸಮೀಪದ ಬಲಮುರಿ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಬಲಮುರಿ ಗ್ರಾಮದ ವಾಟೆಕಾಡು ಪೈಸಾರಿ ನಿವಾಸಿ ಕೂಲಿ ಕಾರ್ಮಿಕರಾದ ರಂಜು ಮತ್ತು ಪುಷ್ಪ ದಂಪತಿಯ ಪುತ್ರ ಪುನೀತ್ (21) ಮೃತಪಟ್ಟ ದುರ್ದೈವಿ.

 ಭಾನುವಾರ ಮಧ್ಯಾಹ್ನ ನಾಲ್ವರು ಹುಡುಗರ ತಂಡ ಬಲಮುರಿ ಕಾವೇರಿ ನದಿಯ ಸೇತುವೆಯ ಸಮೀಪ ಸ್ನಾನ ಮಾಡಲು ತೆರಳಿದ್ದು ಪುನೀತ್ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತರಾಗಿದ್ದಾರೆ. ಬಳಿಕ ಬಲಮುರಿ ನಿವಾಸಿ ಮುಳುಗು ತಜ್ಞ ಎಂ. ಆರ್ ಬಿಪಿನ್ ಮೃತದೇಹವನ್ನು ಪತ್ತೆಹಚ್ಚಿ ನೀರಿನಿಂದ ಮೇಲೆತ್ತಿದ್ದಾರೆ. ನಾಪೋಕ್ಲು ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪ್ರಕರಣ ದಾಖಲಿಸಿ ಕಾನೂನಿನ ಕ್ರಮ ಕೈಗೊಂಡಿದ್ದಾರೆ .

What's Your Reaction?

Like Like 0
Dislike Dislike 0
Love Love 0
Funny Funny 1
Angry Angry 0
Sad Sad 3
Wow Wow 1