ಕಡಂಗ: ಯಶಸ್ವಿಯಾಗಿ ನಡೆದ ನಾಪೋಕ್ಲು ವಲಯ ಮಟ್ಟದ ಕ್ರೀಡಾಕೂಟ
ಕಡಂಗ: ನಾಪೋಕ್ಲು ವಲಯ ಮಟ್ಟದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟವು ಕಡಂಗ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಿತು. ಕ್ರೀಡಾಕೂಟದ ಉದ್ಘಾಟನೆಯನ್ನು ನರಿಯಂದಡ ಗ್ರಾಮ ಪಂಚಾಯಿತಿ ಸದಸ್ಯರಾದ ಸಿ.ಇ.ಸುಬೀರ್ ಮತ್ತು ಪಾಂಡಂಡ ರಾಣಿ ಗಣಪತಿ ಅವರು ನೆರವೇರಿಸಿದರು. ನಾಪೋಕ್ಲು ವಲಯದಲ್ಲಿರುವ ಹತ್ತು ಶಾಲೆಗಳ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಥ್ರೋ- ಬಾಲ್ ವಾಲಿಬಾಲ್,ಖೋ-ಖೋ ಹಾಗೂ ಕಬ್ಬಡಿ ಪಂದ್ಯಗಳು ನಡೆಯಿತು.
ಕ್ರೀಡಾಕೂಟದ ಸಮಾರಂಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಫಾತಿಮಾ, ಸಂಶಿಯಾ, ಅಬ್ದುಲ್ ರಜಾಕ್ ಸಿಎಚ್, ಜಕ್ರಿಯ, ಶಾಲಾ ಶಿಕ್ಷಕರಾದ ಜಯಮಾಲ, ಸೈಬುನ್ನಿಸ ಉಪಸ್ಥಿತರಿದ್ದರು.ಶಾಲಾ ಪ್ರಭಾರ ಮುಖ್ಯ ಶಿಕ್ಷರಾದ ಶ್ರೀಮತಿ ವಿಮಲಾ ಕೆ. ಎಂ. ರವರು ಸ್ವಾಗತ ಕೋರಿದರು. ಕೊಟ್ಟಮುಡಿ ಶಾಲೆಯ ದೈಹಿಕ ಶಿಕ್ಷಕರಾದ ರಘು ರವರು ಪ್ರಾಸ್ತವಿಕ ನುಡಿಗಳನ್ನಾಡಿ ಕ್ರೀಡಾಪಟು ಗಳಿಗೆ ಶುಭ ಹಾರೈರಿಸಿದರು. ವೇದಿಕೆ ಯಲ್ಲಿ ದೈಹಿಕ ಶಿಕ್ಷಕರಾದ ಶ್ರೀ ಎನ್. ಕೆ. ಅಪ್ಪಣ್ಣ, ಶ್ರೀಮತಿ ಶೋಭಾ ಹಾಜರಿದ್ದರು. ವಂದನಾ ರ್ಪಣೆಯನ್ನು ಶಿಕ್ಷಕರಾದ ವತ್ಸಲ ಎ. ರವರು ನೆರೆವೇರಿಸಿ ಕೊಟ್ಟರು. ಕಾರ್ಯಕ್ರಮದಲ್ಲಿ ಸುಮಾರು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು, 25 ಶಿಕ್ಷಕರು ಹಾಜರಿದ್ದರು.
ವರದಿ:ನೌಫಲ್