ನಾಪೋಕ್ಲು ಹಲ್ಲೆ ಪ್ರಕರಣ-ಆರೋಪಿಗಳು ನ್ಯಾಯಾಂಗ ವಶಕ್ಕೆ
admincoorgdaily

ಮಡಿಕೇರಿ: ದಿನಾಂಕ 27-02-2026 ರಂದು ಪಿರ್ಯಾದಿಯವರಾದ ಕರವಂಡ ಲವ ನಾಣಯ್ಯ ಎಂಬುವರು ನೀಡಿದ ದೂರಿನಲ್ಲಿ ಗೌತಮ್ ಎಂಬುವರಿಗೆ ನಾಪೋಕ್ಲು ನಗರದ ಪೋನ್ನಾಡು ಅಂಗಡಿಯ ಮುಂಭಾಗ ಆರೋಪಿಗಳು ಹಲ್ಲೆ ಮಾಡಿರುವ ಬಗ್ಗೆ ದೂರು ನೀಡಿದ್ದು ಈ ಬಗ್ಗೆ ನಾಪೊಕ್ಲು ಪೊಲೀಸ್ ಠಾಣೆಯಲ್ಲಿ ಮೊ.ಸಂ 25/2026 109. 115(2), 351(2), 352,118(1) ರೇವಿ 3(5) ಬಿ.ಎನ್.ಎಸ್ ರೀತ್ಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ.
ಸದರಿ ಪ್ರಕರಣದಲ್ಲಿ ತನಿಖೆ ಕೈಗೊಂಡು ಆರೋಪಿಗಳಾದ 1) ಸುಹೈಲ್ ಪಿ. ಹೆಚ್. ತಂದೆ ಹಂಸ ಪ್ರಾಯ 24 ವರ್ಷ ವಾಸ ಕಾರೆಕಾಡು ನಾಪೋಕ್ಲು 2) ಸಿದ್ದೀಕ್ ಕೆ. ಇ ತಂದೆ ಇಸ್ಮಾಯಿಲ್ ಪ್ರಾಯ 20 ವರ್ಷ ವಾಸ ಬೇತು ಗ್ರಾಮ 3) ನಾಫಿ ಪಿ. ಎಂ ತಂದೆ ಮೊಹಮ್ಮದ್ ಪ್ರಾಯ 19 ವರ್ಷ ವಾಸ ಇಂದಿರಾನಗರ ನಾಪೋಕ್ಲು 4) ರಾಶೀದ್ ಪಿ. ಎ ಅಚ್ಚಿ ತಂದೆ ಅಬ್ದುಲ್ ರೇಹಮಾನ್ ಪ್ರಾಯ 30 ವರ್ಷ ವಾಸ ಇಂದಿರಾನಗರ ನಾಪೋಕ್ಲು ಎಂಬವರನ್ನು ದಸ್ತಗಿರಿ ಮಾಡಿ ಪೊಲೀಸ್ ವಶಕ್ಕೆ ಪಡೆದುಕೊಂಡು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.