ನಾಪೋಕ್ಲು; ಬೇತು ಗ್ರಾಮದಲ್ಲಿ ಗಾಳಿ-ಮಳೆಗೆ ಅಂಗಡಿ ಮಳಿಗೆಯ ಮೇಲೆ ಉರುಳಿ ಬಿದ್ದ ಅಡಿಕೆ ಮರ
admincoorgdaily

ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು :ನಾಪೋಕ್ಲು ವಿನಲ್ಲಿ ಬುಧವಾರ ಮಧ್ಯಾಹ್ನದ ನಂತರ ಸುರಿದ ಗಾಳಿ ಮಳೆಗೆ ಅಡಿಕೆ ಮರವೊಂದು ಅಂಗಡಿ ಮಳಿಗೆಯ ಮೇಲೆ ಉರುಳಿ ಬಿದ್ದಪರಿಣಾಮ ಮಳಿಗೆಗೆ ಅಳವಡಿಸಲಾದ ಶೀಟ್ ಗಳು ಹಾನಿಯಾದ ಘಟನೆ ನಾಪೋಕ್ಲು ಮಡಿಕೇರಿ ಮುಖ್ಯರಸ್ತೆಯ ಬೇತು ಗ್ರಾಮದಲ್ಲಿ ನಡೆದಿದೆ.
ಬೇತು ಗ್ರಾಮದ ನಿವಾಸಿ ಟಿ.ಎ. ಮಹಮ್ಮದ್ ಹನೀಫ್ ಎಂಬುವವರ ಮನೆಯ ಸಮೀಪವಿರುವ ಅಡಿಕೆ ಮರವೊಂದು ಬುಧವಾರ ಮಧ್ಯಾಹ್ನದ ನಂತರ ಸುರಿದ ಗಾಳಿ ಮಳೆಗೆ ಮನೆಯ ಸಮೀಪದ ವೆಲ್ಡಿಂಗ್ ಶಾಪ್ ಮಳಿಗೆಯ ಮೇಲೆ ಉರುಳಿ ಬಿದ್ದಿದೆ.ಇದರಿಂದ ಮಳಿಗೆಯ ಕಬ್ಬಿಣದ ಪೈಪ್ ಹಾಗೂ 8 ಸಿಮೆಂಟ್ ಶೀಟ್ ಗಳು ಹಾನಿಯಾಗಿದ್ದು ನಷ್ಟ ಸಂಭವಿಸಿದೆ. ಮರ ಬೀಳುವ ಶಬ್ದ ಕೇಳಿ ಮಳಿಗೆಯಲ್ಲಿ ಇದ್ದವರು ಹೊರ ಓಡಿ ಅಪಾಯದಿಂದ ಪಾರಾಗಿದ್ದಾರೆ.