ನಾಪೋಕ್ಲು; ಅಕ್ರಮ ಮರಳು ದಂಧೆಗೆ ಬಿತ್ತು ಬ್ರೇಕ್; ಪೊಲೀಸರು ಏನ್ಮಾಡಿದ್ರೂ ಗೊತ್ತೇ!

Dec 16, 2025 - 22:25
Dec 17, 2025 - 11:04
 0  1.6k
ನಾಪೋಕ್ಲು; ಅಕ್ರಮ ಮರಳು ದಂಧೆಗೆ ಬಿತ್ತು ಬ್ರೇಕ್;  ಪೊಲೀಸರು ಏನ್ಮಾಡಿದ್ರೂ ಗೊತ್ತೇ!

ವರದಿ:ಝಕರಿಯ ನಾಪೋಕ್ಲು

 ನಾಪೋಕ್ಲು :ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಕಾವೇರಿ ನದಿ ದಡದಿಂದ ಅಕ್ರಮವಾಗಿ ಮರಳು ದಂಧೆ ನಡೆಸುತ್ತಿರುವ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಮರಳು ಸಾಗಿಸುವ ದಾರಿಗೆ ಅಡ್ಡಲಾಗಿ ಟ್ರಂಚ್ ತೆಗೆದು ಮರಳು ದಂಧೆಗೆ ಕಡಿವಾಣ ಹಾಕಿದ್ದಾರೆ.

ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಚೆರಿಯಪರಂಬು, ಕೂರುಳಿ ಗ್ರಾಮದಲ್ಲಿರುವ ಕಾವೇರಿ ನದಿ ದಡದಿಂದ ಆಕ್ರಮವಾಗಿ ಮರಳು ದಂಧೆ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರು ನೀಡಿದ ಮಾಹಿತಿ ಹಿನ್ನೆಲೆ ಸ್ಥಳಕ್ಕೆ ಧಾವಿಸಿದ ನಾಪೋಕ್ಲು ಠಾಣಾಧಿಕಾರಿ ರಾಘವೇಂದ್ರ ಹಾಗೂ ಸಿಬ್ಬಂದಿಗಳು ಪರಿಶೀಲಿಸಿ ಜೆಸಿಬಿ ಯಂತ್ರದ ಮೂಲಕ ಕಾವೇರಿ ನದಿ ದಡಕ್ಕೆ ಮರಳು ತೆಗೆಯಲು ತೆರಳುವ ರಸ್ತೆಗೆ ಅಡ್ಡಲಾಗಿ ಟ್ರಂಚ್ (ಚರಂಡಿ )ತಗೆದು ವಾಹನಗಳು ತೆರಳದಂತೆ ಕ್ರಮ ಕೈಗೊಂಡು ಮರಳು ದಂಧೆಕೋರರ ದಂಧೆಗೆ ಕಡಿವಾಣ ಹಾಕಿದ್ದಾರೆ.

ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳುದಂಧೆ ನಡೆಸುತ್ತಿರುವ ಬಗ್ಗೆ ಮಾಹಿತಿ ತಿಳಿದಲ್ಲಿ ಸಾರ್ವಜನಿಕರು ನಾಪೋಕ್ಲು ಪೊಲೀಸ್ ಠಾಣೆಗೆ ಅಥವಾ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಮಾಹಿತಿ ನೀಡುವಂತೆ ಪೋಲಿಸ್ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಿದೆ.

What's Your Reaction?

Like Like 3
Dislike Dislike 1
Love Love 0
Funny Funny 3
Angry Angry 0
Sad Sad 0
Wow Wow 0