ನಾಪೋಕ್ಲು;ಬಿಲ್ಲವ ಸಮಾಜದ ನೂತನ ಸಮುದಾಯ ಭವನಕ್ಕೆ ಭೂಮಿ ಪೂಜೆ
admincoorgdaily

ನಾಪೋಕ್ಲು;ಬಿಲ್ಲವ ಸಮಾಜದವರ ನೂತನ ಸಮುದಾಯ ಭವನದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದರು.
ನಾಪೋಕ್ಲು ಕೊಡವ ಸಮಾಜದಲ್ಲಿ ಈ ಪ್ರಯುಕ್ತ ಆಯೋಜಿಸಿದ ಆಟಿಡೊಂಜಿ-2026 ಹಾಗೂ ಬೃಹತ್ ರಕ್ಷದಾನ ಕಾರ್ಯಕ್ರಮದಲ್ಲಿ ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಮಾನ್ಯ ಶಾಸಕರು, ಬಿಲ್ಲವಾ ಸಮುದಾಯದವರು ತಮ್ಮದೇ ಆದ ಆಚಾರ-ವಿಚಾರ ಹಾಗೂ ಕಲೆಯಿಂದ ಕೊಡಗು ಜಿಲ್ಲೆಗೆ ಅನೇಕ ರೀತಿಯ ಕೊಡುಗೆಯನ್ನು ನೀಡಿದ್ದಾರೆ.
ಪೂಜ್ಯನೀಯ ನಾರಾಯಣ ಗುರುರವರ ಅನುಯಾಯಿಗಳಾದ ಬಿಲ್ಲವ ಸಮಾಜದವರು ಸದಾ ಶಾಂತಿ ಪ್ರಿಯರಾಗಿದ್ದು, ಈ ಸಮುದಾಯದ ಅನೇಕರು ರಾಜ್ಯ ಮಾತ್ರವಲ್ಲದೆ ರಾಷ್ಟ್ರಮಟ್ಟದಲ್ಲಿ ಉನ್ನತ ಸ್ಥಾನಮಾನವನ್ನು ಗಳಿಸಿದ ಗೌರವಕ್ಕೆ ಪಾತ್ರರಾದವರಾಗಿದ್ದಾರೆ. ಇಂತಹ ಒಂದು ಬಹು ಸಂಸ್ಕೃತಿಯ ಸಮಾಜದವರ ಸಮುದಾಯ ಭವನಕ್ಕೆ ಭೂಮಿ ಪೂಜೆ ನೆರವೇರಿಸಲು ತನಗೆ ಸಂತೋಷ ತಂದಿದ್ದು ಶೀಘ್ರದಲ್ಲೇ ಇದು ಪೂರ್ಣಗೊಂಡು ಸಮುದಾಯ ಬಾಂಧವರ ಉಪಯೋಗಕ್ಕೆ ದೊರಕುವಂತಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಸೋಲೂರು ರಾಮನಗರ ಆರ್ಯ ಈಡಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರು ಶ್ರೀ ವಿಕ್ಯಾತನಂದ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು, ನಾಪೋಕ್ಲು ಬಿಲ್ಲವ ಸಮಾಜದ ಅಧ್ಯಕ್ಷರು ಬಿ ಎಂ ಪ್ರತೀಪ, ಕೊಡಗು ಜಿಲ್ಲಾ ಬಿಲ್ಲವ ಸಮಾಜ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಲಿಂಗಪ್ಪ, ಬ್ಲಾಕ್ ಕಾರ್ಯಾಧ್ಯಕ್ಷ ಸೌಕತ್ ಆಲಿ, ವಲಯ ಅಧ್ಯಕ್ಷರು ಕುಶಾಲಪ್ಪ, ಪಂಚಾಯಿತಿ ಅಧ್ಯಕ್ಷರು ವನಜಾಕ್ಷಿ, ಸದಸ್ಯರು ಅರುಣ್ ಬೇಬ, ಬಿಲ್ಲವ ಸಮಾಜದ ಸದಸ್ಯರುಗಳು ಹಾಗೂ ಪ್ರಮುಖರಾದ ಕೆ ಡಿಪಿ ಸದಸ್ಯರು ಬಾಚಮಾಂಡ ಲವ ಚಿಣ್ಣಪ್ಪ, ಕಕ್ಕಬೆ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ ವಲಯ ಅಧ್ಯಕ್ಷರು ಕಲಿಯಂಡ ಸಂಪನ್ ಅಯ್ಯಪ್ಪ, ಉಪಸ್ಥಿತರಿದ್ದರು.