ರಾಷ್ಟ್ರೀಯ ಶೂಟಿಂಗ್: ಪೊನ್ನೀರ ಉದಾಂತ್ ಚಾಂಪಿಯನ್
admincoorgdaily
ಮಡಿಕೇರಿ:ಒಡಿಶಾ ರಾಜ್ಯದ ರೂರ್ಕೆಲಾದಲ್ಲಿ ನಡೆದ ಏಕಲವ್ಯ ಮಾದರಿ ವಸತಿ ಶಾಲೆಗಳ 14 ವರ್ಷದೊಳಗಿನ ರಾಷ್ಟ್ರೀಯ ಏರ್ ರೈಫಲ್ 10 ಮೀ ಶೂಟಿಂಗ್ ಸ್ಪರ್ಧೆಯಲ್ಲಿ ಪೊನ್ನೀರ ಉದಾಂತ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಈ ಮೂಲಕ ಈ ಸಾಧನೆ ಮಾಡಿದ ಕೊಡಗಿನ ಪ್ರಥಮ ಬಾಲಕ ಎಂಬ ಇತಿಹಾಸವನ್ನು ಉದಾಂತ್ ನಿರ್ಮಿಸಿದ್ದಾರೆ ನವೆಂಬರ್ 10 ರಿಂದ 15 ರವರೆಗೆ ನಡೆದ ಸ್ಪರ್ಧೆಯಲ್ಲಿ ವಿವಿಧ ರಾಜ್ಯಗಳ 50 ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದರು.
ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಉದಾಂತ್ ರಾಜ್ಯದ ಏಕೈಕ ಶೂಟಿಂಗ್ ಸ್ಪರ್ದಿಯಾಗಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದರು. ಪೊನ್ನೀರ ಉದಾಂತ್ ಉತ್ತಯ್ಯ ಪೊನ್ನೀರ ಮೋಹನ್-ಪ್ರೇಮಿ ದಂಪತಿಯ ಪುತ್ರನಾಗಿದ್ದು ಬಾಳುಗೋಡು ಏಕಲವ್ಯ ವಸತಿ ಶಾಲೆಯಲ್ಲಿ 8 ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ.
ಉದಾಂತ್ ಜೊತೆ ಬಾಳುಗೋಡು ಏಕಲವ್ಯ ಶಾಲೆಯ ದೈಹಿಕ ಶಿಕ್ಷಕ ಗಂಗಾಧರ್, ಸಹಾಯಕರಾಗಿ ತೆರಳಿದ್ದರು. ಉದಾಂತ್ ಗೆ ತಂದೆ ಮೋಹನ್ ಅವರೇ ಶೂಟಿಂಗ್ ತರಬೇತಿ ನೀಡಿದ್ದು ಈ ಹಿಂದೆ ಜಿಲ್ಲೆಯ ವಿವಿಧೆಡೆ ನಡೆದ ಶೂಟಿಂಗ್ ಸ್ಪರ್ಧೆಯಲ್ಲೂ ಬಹುಮಾನ ಬಾಚಿದ್ದಾರೆ.