ಗೌಡಳ್ಳಿಯಲ್ಲಿ ರಾಷ್ಟ್ರ ಮಟ್ಟದ ಫುಟ್ಬಾಲ್ ‌ಪಂದ್ಯಾವಳಿ

Feb 15, 2026 - 17:14
 0  283
ಗೌಡಳ್ಳಿಯಲ್ಲಿ ರಾಷ್ಟ್ರ ಮಟ್ಟದ ಫುಟ್ಬಾಲ್ ‌ಪಂದ್ಯಾವಳಿ

ಸೋಮವಾರಪೇಟೆ:ಓಂ ಶ್ರೀ ನವದುರ್ಗಾಪರಮೇಶ್ವರಿ ದೇವಾಲಯ ಸಮಿತಿ ವತಿಯಿಂದ ಬಿಜಿಎಸ್ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಮುಕ್ತ ಫುಟ್ಬಾಲ್ ಪಂದ್ಯಾಟದಲ್ಲಿ ಬೀಟಿಕಟ್ಟೆ ನಿಲ್‌ಶಾಂತ್ ಬಾಯ್ಸ್ ಹಾಗು ಎಫ್‌ಸಿ ಗೌಡಳ್ಳಿ ತಂಡ ಫೈನಲ್ ತಲುಪಿವೆ.

ಮಹಿಳೆಯರ ಥ್ರೋಬಾಲ್ ಪಂದ್ಯಾಟದಲ್ಲಿ ದುರ್ಗಾಂಭ ಮತ್ತು ಆಗ್ನಿ ಕ್ಲಬ್ ತಂಡಗಳು ಫೈಲನ್‌ಗೇರಿವೆ. ಶೊದಲ ಸೆಮಿಫೈನಲ್‌ನಲ್ಲಿ ಎಫ್‌ಸಿ ಗೌಡಳ್ಳಿ ತಂಡ ನಿಶಾಂತ್ ಕಾಫಿ ಗ್ರೂಪ್ ಸೋಲಿಸಿ ಫೈನಲ್ ಗೇರಿತ್ತು. 2ನೇ ಸೆಮಿಫೈನಲ್‌ನಲ್ಲಿ ನೀಲ್‌ಶಾಂತ್ ಬಾಯ್ಸ್ ತಂಡ ಡೈಮಂಡ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶ ಮಾಡಿತ್ತು.

 ದೇವಾಲಯ ಸಮಿತಿ ಅಧ್ಯಕ್ಷ ಬಿ.ಪಿ.ಮೊಗಪ್ಪ ಶುಕ್ರವಾರ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಶುಕ್ರವಾರ ಬೆಳಿಗ್ಗೆ ಜಾತ್ರೋತ್ಸವ ಉದ್ಘಾಟಯನ್ನು ಗೌಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಚ್.ಮಂಜುನಾಥ್ ಉದ್ಘಾಟಿಸಿದರು. ಗೌಡಳ್ಳಿ ಪಶು ಇಲಾಖೆಯ ವೈದ್ಯಾಧಿಕಾರಿ ಸತೀಶ್ ಕುಮಾರ್ ರಾಸುಗಳಿಗೆ ಚಿಕಿತ್ಸೆ ನೀಡಿದರು. ಶನಿವಾರ ಬೆಳಿಗ್ಗೆ ಪುರುಷರಿಗೆ ಮತ್ತು ಮಹಿಳೆಯರಿಗೆ ಗುಡ್ಡಗಾಡು ಓಟ ನಡೆಯಿತು.

 ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಬಸ್ಸು ಹುಡುಕಾಟ ಸ್ಪರ್ಧೆಗಳು ನಡೆದವು. ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯಿತು. ದೇವಾಲಯ ಸಮಿತಿಯ ಉಪಾಧ್ಯಕ್ಷ ಎಚ್.ಎನ್.ಚಂದ್ರಶೇಖರ್, ಕಾರ್ಯದರ್ಶಿ ವಿಶ್ವರೂಪಚಾರ್, ಖಜಾಂಚಿ ಟಿ.ಆರ್.ರಾಮಚಂದ್ರ, ಕ್ರೀಡಾಸಮಿತಿಯ ಅಧ್ಯಕ್ಷ ಎಸ್.ಬಿ.ಗುರುಪ್ರಸಾದ್, ಉಪಾಧ್ಯಕ್ಷ ಸುಮಂತ್ ಕೂಗೂರು, ಕಾರ್ಯದರ್ಶಿ ಸಿ.ಈ.ವೆಂಕಟೇಶ್, ಖಜಾಂಚಿ ಜಿ.ವಿ.ಯೋಗೇಶ್ ಮತ್ತು ನಿದೇರ್ಶಕರುಗಳು ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0