ಪಾಲಿಬೆಟ್ಟದಲ್ಲಿ ರಾಷ್ಟ್ರೀಯ ಮಟ್ಟದ ಪುಟ್ಬಾಲ್ ಪಂದ್ಯಾವಳಿಗೆ ಚಾಲನೆ; ಕ್ರೀಡಾಪಟುಗಳಿಗೆ ಪ್ರೋತ್ಸಾಹ ಅಗತ್ಯ : ವಿಜು ಸುಬ್ರಮಣಿ
ಪಾಲಿಬೆಟ್ಟ :- ಯಂಗ್ ಇಂಡಿಯಾ ಯೂತ್ ಕ್ಲಬ್ ನ 55ನೇ ಸುವರ್ಣ ಮಹೋತ್ಸವದ ಸಂಭ್ರಮಕ್ಕಾಗಿ ರಾಷ್ಟ್ರೀಯ ಮಟ್ಟದ ಮುಕ್ತ 5s ಫುಟ್ಬಾಲ್ ಪಂದ್ಯಾವಳಿಗೆ ಪಾಲಿಬೆಟ್ಟ ಕ್ರೀಡಾ ಮೈದಾನದಲ್ಲಿ ಚಾಲನೆ ನೀಡಲಾಯಿತು.
ಜಿಲ್ಲಾ ಪಂಚಾಯಿತಿ ಸಾಮಾಜಿಕ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮೂಕೂಂಡ ವಿಜು ಸುಬ್ರಮಣಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ರಾಷ್ಟ್ರೀಯ ಮಟ್ಟದ ಫುಟ್ಬಾಲ್ ಪಂದ್ಯಾವಳಿ ನಡೆಯುತ್ತಿರುವುದು ಜಿಲ್ಲೆಯ ಕ್ರೀಡಾಪಟುಗಳಿಗೆ ರಾಜ್ಯ ರಾಷ್ಟ್ರಮಟ್ಟದ ಆಟಗಾರನ್ನ ಪರಿಚಯಿಸುವ ಮೂಲಕ ಯಂಗ್ ಇಂಡಿಯಾ ಯೂತ್ ಕ್ಲಬ್ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು ಕ್ರೀಡೆ ಜಿಲ್ಲೆ ಎಂದು ಹೆಸರುವಾಸಿಯಾಗಿದ್ದರು
ಕ್ರೀಡಾಪಟುಗಳಿಗೆ ಸರ್ಕಾರದ ಪ್ರೋತ್ಸಾಹ ಕೊರತೆ ಇದೆ ಗ್ರಾಮೀಣ ಭಾಗದಲ್ಲಿ ಸುಸಜ್ಜಿತ ಮೈದಾನದ ವ್ಯವಸ್ಥೆ ಇಲ್ಲದೆ ಕ್ರೀಡಾಪಟುಗಳು ಕ್ರೀಡೆಯಿಂದ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ
ಮೈದಾನದ ವ್ಯವಸ್ಥೆ ಸೇರಿದಂತೆ ಸೌಲಭ್ಯಗಳನ್ನ ಕಲ್ಪಿಸಿ ಕೊಡಬೇಕೆಂದು ಕ್ರೀಡಾ ಜಿಲ್ಲಾಡಳಿತವನ್ನು ಒತ್ತಾಯಿಸಿದರು.
55 ವರ್ಷ ಪೂರೈಸಿರುವ ಯಂಗ್ ಇಂಡಿಯಾ ಯುವಕ ಸಂಘದ ಕಟ್ಟಡ ಶಿಥಿಲ ವ್ಯವಸ್ಥೆಯಲ್ಲಿದ್ದು ಸುಸಜ್ಜಿತ ನೂತನ ಕಟ್ಟಡ ನಿರ್ಮಾಣಕ್ಕೆ ಜಿಲ್ಲೆಯ ದಾನಿಗಳ ಹೆಚ್ಚಿನ ಪ್ರೋತ್ಸಾಹ ಅಗತ್ಯವಾಗಿದ್ದು ,ಯುವಕ ಸಂಘದ ಮುಂದಾಲೋಚನೆಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಅಜಿತ್ ಕರುಂಬಯ್ಯ ಮಾತನಾಡಿ 55 ವರ್ಷ ಪೂರೈಸಿರುವ ಯಂಗ್ ಇಂಡಿಯಾ ಯೂತ್ ಕ್ಲಬ್ ಗ್ರಾಮದಲ್ಲಿ ರಾಷ್ಟ್ರೀಯ ಮಟ್ಟದ ಫುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸುವ ಮೂಲಕ ಜಿಲ್ಲೆಯ ಕ್ರೀಡಾಪಟುಗಳಿಗೆ ಹೆಚ್ಚಿನ ಕಲಿಕ ಪ್ರೋತ್ಸಾಹ ನೀಡಿದಂತಾಗಿದೆ
ಯುವಕ ಸಂಘವನ್ನು ಇಂದಿನಿಂದಲೂ ಅಚ್ಚುಕಟ್ಟಾಗಿ ಮುನ್ನುಡಿಸಿಕೊಂಡು ಬರುತ್ತಿದ್ದು ಇಂದಿನ ಯುವ ಸಮೂಹ ಕ್ರೀಡಾ ಮನೋಭಾವದೊಂದಿಗೆ ಸಮಾಜ ಸೇವೆಯಲ್ಲಿ ಸೇವೆಯಲ್ಲಿ ತೊಡಗಿಸಿಕೊಂಡು ಮುನ್ನಡೆಸಬೇಕೆಂದು ಹೇಳಿದರು.
ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಗಣೇಶ್ ಮಾತನಾಡಿ ಜಿಲ್ಲೆಗೆ ಮಾದರಿಯಾಗಿರುವ ಯಂಗ್ ಇಂಡಿಯಾ ಕ್ಲಬ್
ರಾಷ್ಟ್ರೀಯ ಮಟ್ಟದ ಫುಟ್ಬಾಲ್ ಪಂದ್ಯಾವಳಿ ಆಯೋಜಿಸಿ ಅಚ್ಚುಕಟ್ಟಾದ ವ್ಯವಸ್ಥೆಯೊಂದಿಗೆ ಸಿಸ್ತುಬದ್ಧವಾಗಿ ನೋಡಲು ಕ್ರೀಡಾಪಟುಗಳಿಗೆ ಅವಕಾಶ ಕಲ್ಪಿಸಿ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಿ ಎಸ್ ಐ ಚರ್ಚ್ನ ರೇವ್ ಶಶಿಕುಮಾರ್ ಮಾತನಾಡಿ ಶಾಂತಿ ಸಹ ಬಾಳ್ವೆಯೊಂದಿಗೆ ಒಗ್ಗಟ್ಟಿನ ಮೂಲಕ ಧಾರ್ಮಿಕ ಕಾರ್ಯಕ್ರಮ ಸೇರಿದಂತೆ ಕ್ರೀಡಾ ಆಚರಣೆಗಳು ಒಗ್ಗಟ್ಟಾಗಿ ನಡೆಯುತ್ತಿರುವುದು ಮಾದರಿ ಗ್ರಾಮವನ್ನಾಗಿಸಿದೆ.
ಕ್ರೀಡಾ ಚಟುವಟಿಕೆಗಳು ಕ್ರೀಡಾಭಿಮಾನದಿಂದ ನಡೆದಲ್ಲಿ ಪರಸ್ಪರ ಸ್ನೇಹ ಸಮನ್ವಯ ಸಾಧಿಸಲು ಸಾಧ್ಯವಾಗಲಿದೆ ಎಂದರು.
ಮೈದಾನದಲ್ಲಿ ಕಾಲಿನಲ್ಲಿ ಚೆಂಡು ಹೊದಿಯುವ ಮೂಲಕ ಫುಟ್ಬಾಲ್ ಪಂದ್ಯಾವಳಿಗೆ ಗಣ್ಯರು ಚಾಲನೆ ನೀಡಲಾಯಿತು.ಫುಟ್ಬಾಲ್ ಪಂದ್ಯಾವಳಿ ಹಬ್ಬದ ವಾತಾವರಣದಂತೆ ಕಂಡು ಬರುತ್ತಿದ್ದು ಗ್ರಾಮದಲ್ಲಿ
ಸಮಾಜ ಸೇವಕರು ದಾನಿಗಳು ಕ್ರೀಡಾಪಟುಗಳು ಗಣ್ಯರನ್ನು ಸ್ವಾಗತಿಸುವ ಕಟೌಟ್ಗಳು ರಾರಾಜಿಸುತ್ತಿದೆ. ವಿದ್ಯುತ್ ಬೆಳಕಿನ ದೀಪಾಲಂಕಾರಗಳಿಂದ ಮೈದಾನ ಕಂಗೊಳಿಸುತ್ತಿದ್ದು.
ಉದ್ಘಾಟನೆ ಕಾರ್ಯಕ್ರಮದ ಅಂಗವಾಗಿ ಸಿಡಿಮದ್ದು ಪ್ರದರ್ಶನವೂ ನಡೆಯಿತು.
ಚುಮು ಚುಮು ಚಳಿಯ ನಡುವೆಯೂ ಫುಟ್ಬಾಲ್ ಪಂದ್ಯಾವಳಿ ವೀಕ್ಷಣೆಗೆ ವಿವಿಧಡೆಗಳಿಂದ ಆಗಮಿಸಿದ ಕ್ರೀಡಾಭಿಮಾನಿಗಳು ವಿವಿಧ ರಾಜ್ಯಗಳಿಂದ ಆಗಮಿಸಿದ ಆಟಗಾರರಿಗೆ ಉರಿದುಂಬಿಸಿದರು. ಯಂಗ್ ಇಂಡಿಯಾ ಯೂಥ್ ಕ್ಲಬ್ ನ ಅಧ್ಯಕ್ಷ ಪಿ ಎ ಸಲೀಂ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸೇವಾದಳದ ರಾಜ್ಯ ಸಮಿತಿ ಪ್ರಮುಖರಾದ ತೆರೆಸ ವಿಕ್ಟರ್ , ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಸಾಬು ಕಾಳಪ್ಪ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕುಟ್ಟಂಡ ವಸಂತ್, ಅಮ್ಮತ್ತಿ ಮಿಲನ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಲೆಜೆಸ್, ಕ್ಯಾಪ್ಟನ್ ಇಲೆವೆನ್ ಸಂಘದ ಅಧ್ಯಕ್ಷ ರವಿಕುಮಾರ್,
ಸಮಾಜ ಸೇವಕರಾದ ಕುಟ್ಟಂಡ ದೇಚಿ, ವಿಜೇಶ್, ಅಬೂಬಕ್ಕರ್, ಸಿದ್ದೀಕ್, ಮುಸ್ತಫಾ, ವಿನೋದ್, ಹರೀಶ್, ಸಬೀರ್, ಸಾಗರ್ ರದೀಸ್, ವಿನೋಸೋಮಣ್ಣ ಸೇರಿದಂತೆ ಯಂಗ್ ಇಂಡಿಯಾ ಯುವಕ ಸಂಘದ ಪದಾಧಿಕಾರಿಗಳು, ಗಣ್ಯರು ಪ್ರಮುಖರು ಹಾಜರಿದ್ದರು.