ಕೈಗ್ ಸ್ಪೋರ್ಟ್ಸ್ ಫೌಂಡೇಷನ್ ಹಾಗೂ ಕಾವೇರಿ ರಾಯಲ್ಸ್ ರಿಕ್ರಿಯೇಷನ್ ಕ್ಲಬ್ ಆಶ್ರಯದಲ್ಲಿ ಸೆ.8ರಿಂದ 13ರವರೆಗೆ ರಾಷ್ಟ್ರೀಯ ಮಟ್ಟದ ಹಾಕಿ ಪಂದ್ಯಾವಳಿ

Jun 6, 2026 - 16:25
 0  92
ಕೈಗ್ ಸ್ಪೋರ್ಟ್ಸ್ ಫೌಂಡೇಷನ್ ಹಾಗೂ ಕಾವೇರಿ ರಾಯಲ್ಸ್ ರಿಕ್ರಿಯೇಷನ್ ಕ್ಲಬ್ ಆಶ್ರಯದಲ್ಲಿ ಸೆ.8ರಿಂದ 13ರವರೆಗೆ ರಾಷ್ಟ್ರೀಯ ಮಟ್ಟದ ಹಾಕಿ ಪಂದ್ಯಾವಳಿ

ಮಡಿಕೇರಿ: ಕೈಗ್ ಸ್ಪೋರ್ಟ್ಸ್ ಫೌಂಡೇಷನ್ ಹಾಗೂ ಕಾವೇರಿ ರಾಯಲ್ಸ್ ರಿಕ್ರಿಯೇಷನ್ ಕ್ಲಬ್ ಆಶ್ರಯದಲ್ಲಿ ಸೆ.೮ರಿಂದ ೧೩ರವರೆಗೆ ಗೋಣಿಕೊಪ್ಪದ ಕ್ಯಾಲ್ಸ್ ಟರ್ಫ್ ಮೈದಾನದಲ್ಲಿ ರಾಷ್ಟ್ರೀಯ ಮಟ್ಟದ ಹಾಕಿ ಪಂದ್ಯಾವಳಿ ನಡೆಯಲಿದೆ ಎಂದು ಕಾವೇರಿ ರಾಯಲ್ಸ್ ರಿಕ್ರಿಯೇಷನ್ ಕ್ಲಬ್‌ನ ಉಪಾಧ್ಯಕ್ಷ ಸಂಪತ್ ದೇವಯ್ಯ ತಿಳಿಸಿದ್ದಾರೆ.

 ಪುರುಷರ ವಿಭಾಗದಲ್ಲಿ ಕೊಡಗು ಲೀಗ್‌ನ ಅಗ್ರ ೧೫ ತಂಡಗಳು ಹಾಗೂ ಕೈಗ್ ಸಂಸ್ಥೆ ಸೇರಿ ೧೬ ತಂಡಗಳು ನಾಕೌಟ್ ಮಾದರಿಯಲ್ಲಿ ಸೆಣಸಲಿವೆ. ವಿಜೇತರಿಗೆ ರೂ.೨ ಲಕ್ಷ, ದ್ವಿತೀಯ ರೂ.೧ ಲಕ್ಷ, ತೃತೀಯ ರೂ.೫೦ ಸಾವಿರ, ಚತುರ್ಥ ರೂ.೩೦ ಸಾವಿರ ನಗದು ನೀಡಲಾಗುವುದು. ಶ್ರೇಷ್ಠ ಆತಿಥೇಯ ಹಾಗೂ ಅತಿಥಿ ಆಟಗಾರರಿಗೆ ತಲಾ ೧೭.೮ ಲಕ್ಷದ ನಿವೇಶನ ಬಹುಮಾನವಿದೆ. ಮೊದಲ ಬಾರಿಗೆ ೮ ಮಹಿಳಾ ತಂಡಗಳಿಗೂ ಆಹ್ವಾನ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕೈಗ್ ಸಂಸ್ಥೆಯ ಕೆ.ಶಶಿಮಾದಪ್ಪ, ರಿಕ್ರಿಯೇಷನ್ ಕ್ಲಬ್‌ನ ನಿದೇರ್ಶಕರಾದ ಎಂ.ಪೊನ್ನು, ಎಂ.ಚರ್ಮಣ, ಎಂ.ಸಚಿನ್ ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0