ಬೆಂಗಳೂರಿನಲ್ಲಿ ನಡೆದ ನ್ಯಾಚುರಲ್ ಬಾಡಿಬಿಲ್ಡಿಂಗ್ ಸ್ಪರ್ಧೆ: ವಿರಾಜಪೇಟೆಯ ಪ್ರಜ್ವಲ್ ವಿ.ಎಂ. ಭಾಗಿ

Jun 21, 2026 - 18:12
 0  557
ಬೆಂಗಳೂರಿನಲ್ಲಿ ನಡೆದ ನ್ಯಾಚುರಲ್ ಬಾಡಿಬಿಲ್ಡಿಂಗ್ ಸ್ಪರ್ಧೆ: ವಿರಾಜಪೇಟೆಯ ಪ್ರಜ್ವಲ್ ವಿ.ಎಂ. ಭಾಗಿ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ ಅಂತರರಾಷ್ಟ್ರೀಯ ಮಟ್ಟದ ನ್ಯಾಚುರಲ್ ಬಾಡಿಬಿಲ್ಡಿಂಗ್ ದೇಹದಾರ್ಢ್ಯ ಸ್ಪರ್ಧೆಯಲ್ಲಿ 13ರಿಂದ 19 ವಯಸ್ಸಿನ ವಿಭಾಗದಲ್ಲಿ ವಿರಾಜಪೇಟೆಯ ಗಾಂಧಿನಗರ ನಿವಾಸಿ ಪಿ.ಎ. ಮಂಜುನಾಥ್ ಹಾಗೂ ಸಂತ ಅನ್ನಮ್ಮ ಕಾಲೇಜಿನ ಉಪನ್ಯಾಸಕಿ ಅಶ್ವಿನಿ ದಂಪತಿಯ ಪುತ್ರ, ಸಂತ ಅನ್ನಮ್ಮ ಕಾಲೇಜಿನ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿ ಪ್ರಜ್ವಲ್ ವಿ.ಎಂ. ಭಾಗವಹಿಸಿದರು.

 ಪ್ರಜ್ವಲ್ ಅವರಿಗೆ ವಿರಾಜಪೇಟೆಯ ತೆಲುಗುರ ಬೀದಿಯ ರೀಶೆಪ್ ಫಿಟ್ನೆಸ್ ಜಿಮ್‌ನ ಮಾಲೀಕ ಹಾಗೂ ತರಬೇತುದಾರ ಲಕ್ಷ್ಮೀಶ್ ಮತ್ತು ಮೈಸೂರಿನ ಅರ್ನಾಲ್ಡ್ ಫಿಟ್ನೆಸ್ ಸೆಂಟರ್ ತರಬೇತುದಾರ ರವಿ ಅವರು ಮಾರ್ಗದರ್ಶನ ಹಾಗೂ ತರಬೇತಿ ನೀಡಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0