ಆಫ್ರಿಕಾ ಖಂಡದ ಟಾಂಜಾನಿಯಾದಲ್ಲಿರುವ ಅತ್ಯಂತ ಎತ್ತರದ ಕಿಲಿಮಂಜಾರೊ ಪರ್ವತವನ್ನು ಏರುವ ಮೂಲಕ ಬಹುದೊಡ್ಡ ಸಾಧನೆ ಮಾಡಿದ ಗೋಣಿಕೊಪ್ಪದ ನೀತು ಚಂದನ್

Mar 19, 2026 - 12:35
 0  462
ಆಫ್ರಿಕಾ ಖಂಡದ ಟಾಂಜಾನಿಯಾದಲ್ಲಿರುವ ಅತ್ಯಂತ ಎತ್ತರದ   ಕಿಲಿಮಂಜಾರೊ ಪರ್ವತವನ್ನು ಏರುವ ಮೂಲಕ ಬಹುದೊಡ್ಡ ಸಾಧನೆ ಮಾಡಿದ ಗೋಣಿಕೊಪ್ಪದ ನೀತು ಚಂದನ್

ಗೋಣಿಕೊಪ್ಪ: ಆಫ್ರಿಕಾ ಖಂಡದ ಟಾಂಜಾನಿಯಾದಲ್ಲಿರುವ ಅತ್ಯಂತ ಎತ್ತರದ ಕಿಲಿಮಂಜಾರೊ ಪರ್ವತವನ್ನು ಏರುವ ಮೂಲಕ ಗೋಣಿಕೊಪ್ಪದ ನಿವಾಸಿ ಬಹುದೊಡ್ಡ ಸಾಧನೆ ಮಾಡಿ ಪ್ರಪಂಚದಾದ್ಯಂತ ಗಮನ ಸೆಳೆದಿದ್ದಾರೆ. ಗೋಣಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಮಾಮಹೇಶ್ವರಿ ಬಡಾವಣೆಯ ಒಂದನೇ ವಿಭಾಗದ ನಿವಾಸಿ ನೀತು ಚಂದನ್ ಈ ಸಾಧನೆ ಮಾಡಿದಾರೆ.

ಕಿಲಿಮಂಜಾರೊ ಪರ್ವತವು ಹಿಮದಿಂದ ಆವೃತವಾದ ಶಿಖರವನ್ನು ಹೊಂದಿದೆ, ಸಮುದ್ರಮಟ್ಟದಿಂದ 5895 ಮೀಟರ್ 19341 ಅಡಿ ಎತ್ತರದಲ್ಲಿದೆ. ಈ ಪರ್ವತವನ್ನು ನೀತು ಚಂದನ್ ಅವರು ತಮ್ಮ 43ನೇ ವಯಸ್ಸಿನಲ್ಲಿ 5756 ಮೀಟರ್ ಗಳನ್ನು ಏರುವ ಮೂಲಕ ಗಮನ ಸೆಳೆದಿದ್ದಾರೆ. ಆಫ್ರಿಕಾ ಖಂಡದ ಅತ್ಯಂತ ಎತ್ತರದ ಪರ್ವತ ಮತ್ತು ವಿಶ್ವದ ಅತಿ ಎತ್ತರದ ಸ್ವತಂತ್ರವಾಗಿ ನಿಂತಿರುವ ಪರ್ವತವಾಗಿದ್ದು, ಕಿಬೋ, ಮಾವೆಂಜಿ ಮತ್ತು ಶಿರಾ ಎಂಬ ಮೂರು ಶಂಕುಗಳನ್ನು ಈ ಪರ್ವತ ಹೊಂದಿದೆ.  

ಉತ್ತರ ಟಾಂಜಾನಿಯಾದ ಕೀನ್ಯಾ ಗಡಿ ಹತ್ತಿರ ಈ ಪರ್ವತ ಇದ್ದು ಪರ್ವತಾರೋಹಿಗಳಿಗೆ ವಿಶ್ವದಾದ್ಯಂತ ಜನಪ್ರಿಯ ತಾಣವಾಗಿದೆ. ಪರ್ವತವನ್ನು ಹತ್ತಲು ಮರಂಗು, ಮಚಾಮೆ ಲಿಮೋಶ್ ಎಂಬ ಹಲವು ಮಾರ್ಗಗಳಿವೆ.

 ನೀತು ಚಂದನ್ ಅವರು ಲಿಮೋಶೊ ಮಾರ್ಗದ ಮೂಲಕ ತಮ್ಮ 12 ಜನರ ಸದಸ್ಯರ ತಂಡದೊಂದಿಗೆ ಸುಮಾರು 5 ದಿನಗಳಲ್ಲಿ 5,756 ಕಿಲೋಮೀಟರ್ ಏರುವ ಮೂಲಕ ಮತ್ತು ಎರಡು ದಿನಗಳಲ್ಲಿ ಪರ್ವತವನ್ನು ಇಳಿಯುವ ಮೂಲಕ ಸಾಧನೆ ಮಾಡಿದ್ದಾರೆ. ಇವರು ಗೋಣಿಕೊಪ್ಪದ ಚಿನ್ನದ ಮಳಿಗೆಯ ಮಾಲೀಕ ಎಂಜಿ ಮೋಹನ್ ಮತ್ತು ಸುನಂದ ರವರ ಪುತ್ರಿಯಾಗಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0