ನೆಲ್ಲಿಹುದಿಕೇರಿ;ಇಂದಿನಿಂದ ಫ್ರೆಂಡ್ಸ್ LEGENDS ಕ್ರಿಕೆಟ್ ಲೀಗ್

Mar 28, 2026 - 10:38
 0  118
ನೆಲ್ಲಿಹುದಿಕೇರಿ;ಇಂದಿನಿಂದ ಫ್ರೆಂಡ್ಸ್ LEGENDS ಕ್ರಿಕೆಟ್ ಲೀಗ್

ಸಿದ್ದಾಪುರ;ಫ್ರೆಂಡ್ಸ್ ಕ್ರಿಕೆಟ್ ಲೀಗ್ ಇವರ ಸಂಯುಕ್ತ ಆಶ್ರಯದಲ್ಲಿ ಮೊದಲನೇ ವರ್ಷದ ಹೊನಲುಬೆಳಕಿನ ಲೆಜೆಂಡ್ಸ್ ಕ್ರಿಕೆಟ್ ಲೀಗ್ ಪಂದ್ಯಾಟವನ್ನು ತಾ28 ರಿಂದ ತಾ.30ರ ವರೆಗೆ ಮೂರು ದಿನಗಳ ಕಾಲ ನೆಲ್ಲಿಹುದಿಕೇರಿಯ ಕುಂಬಳ ವೇಲಿ ವಾಸು ರವರ ಮೈದಾನದಲ್ಲಿ ಆಯೋಜಿಸಲಾಗಿದೆ.

12 ತಂಡಗಳು ಈ ಪದ್ಯಾಟದಲ್ಲಿ ಭಾಗವಹಿಸಲಿದ್ದು ಲೀಗ್ ಮಾದರಿಯ ಪಂದ್ಯಾಟದಲ್ಲಿ , ವಿಜಯಶಾಲಿಗಳಾಗುವ ತಂಡಕ್ಕೆ ಪ್ರಥಮ ಬಹುಮಾನವಾಗಿ 70000 ರೂ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನವಾಗಿ 40,000 ರೂ ನಗದು ಹಾಗೂ ಆಕರ್ಷಕ ಟ್ರೋಫಿ, ತೃತಿಯ ಹಾಗೂ ಚತುರ್ಥಕ ಬಹುಮಾನವಾಗಿ ತಲಾ 10000 ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು, ಅದಲ್ಲದೆ ಕ್ರೀಡಾಪಟುಗಳಿಗೆ ವೈಯುಕ್ತಿಕ ಬಹುಮಾನಗಳನ್ನು ಸಹ ನೀಡಲಾಗುವುದು. ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ರಾಜಕೀಯ ಸಾಮಾಜಿಕ ಕ್ರೀಡಾ ರಂಗದ ಪ್ರಮುಖ ವ್ಯಕ್ತಿಗಳು ಆಗಮಿಸಲಿದ್ದು, ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು, ಕ್ರೀಡಾಕೂಟಕ್ಕೆ ಆಗಮಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಿಕೊಡಲು ಫ್ರೆಂಡ್ಸ್ ಕ್ರಿಕೆಟ್ ಲೀಗಿನ ಆಯೋಜಕರಾದ ಸಂಜಯ್, ಶಿಹಬ್, ಸಿಎ ರಫೀಕ್ ಸಿಎ, ಮುಸ್ತಫ ರವರು ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 1
Sad Sad 1
Wow Wow 0